ಆರಾಧನಾಲಯ, ಅಂಗಡಿಯಿಂದ ಕಳವು: ಆರೋಪಿಗಳು ಕರ್ನಾಟಕಕ್ಕೆ ಪರಾರಿ ಶಂಕೆ , ತನಿಖೆ ತೀವ್ರಗೊಳಿಸಿದ ಪ್ರತ್ಯೇಕ ತಂಡ
ಕಾಸರಗೋಡು: ಜಿಲ್ಲೆಯಲ್ಲಿ ಆರು ಆರಾಧನಾಲಯ ಹಾಗೂ ಒಂದು ವ್ಯಾಪಾರ ಸಂಸ್ಥೆಯಿಂದ ಕೇವ ಲ ಎರಡು ದಿನಗಳ ಅಂತರದಲ್ಲಿ ಕಳವು ನಡೆಸಿದ ತಂಡವನ್ನು ಪತ್ತೆಹಚ್ಚಲು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದಲ್ಲಿ ರೂಪೀಕರಿ ಸಿದ ಪ್ರತ್ಯೇಕ ತಂಡ ತನಿಖೆ ಆರಂಭಿಸಿದೆ.
ಕಳೆದ ಶನಿವಾರ ಹಾಗೂ ಆದಿತ್ಯವಾರ ರಾತ್ರಿ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಕಳ್ಳತನ ನಡೆದಿದೆ. ಶನಿವಾರ ರಾತ್ರಿ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಡನೀರು ಶ್ರೀ ವಿಷ್ಣುಮಂ ಗಲ ಮಹಾವಿಷ್ಣು ಕ್ಷೇತ್ರದಲ್ಲಿ ಕಳವು ನಡೆದಿರುವ ಬಗ್ಗೆ ಮೊದಲು ವರದಿ ಯಾಗಿದೆ. ಅಲ್ಲಿಂದ ಕಾಣಿಕೆ ಹುಂಡಿ ಗಳನ್ನು ಕಳವು ನಡೆಸಲಾಗಿದೆ. ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗದಿರಲು ಭಾರೀ ಜಾಗ್ರತೆಯಿಂದ ಕಳವು ತಂಡ ಕಾರ್ಯಾಚರಿಸಿದೆ ಯೆಂದು ಪೊಲೀ ಸರು ನಡೆಸಿದ ಪರಿಶೀಲನೆಯಲ್ಲಿ ತಿಳಿದು ಬಂದಿದೆ. ಕಳವು ಸಂಬಂಧ ಸಂಶಯಾಸ್ಪ ದವಾಗಿ ಕುಖ್ಯಾತ ಕಳ್ಳನ ಮನೆಗೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಆದರೆ ಸಂಶಯಿತ ವ್ಯಕ್ತಿ ಸ್ಥಳದಲ್ಲಿಲ್ಲವೆಂದು ತಿಳಿದುಬಂದಿದೆ. ಅಂದು ರಾತ್ರಿಯೇ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಕಾಡಿ ಬಜಲಕರಿಯದಲ್ಲಿ ಬಾಲಯೇಸು ಪ್ರಾರ್ಥನಾ ಮಂದಿರ ಹಾಗೂ ಪಾವಳದ ಕೊರಗಜ್ಜಕಟ್ಟೆಯಿಂದ ಕಾಣಿಕೆಹುಂಡಿ ಹಾಗೂ ಮೂರುಗೋಳಿ ಬಳಿಯ ಪಾಡಿಯಲ್ಲಿ ಬಶೀರ್ ಎಂಬವರ ಜನರಲ್ ಸ್ಟೋರ್ ಎಂಬೆಡೆಗಳಿಂದ ಕಳವು ನಡೆದಿತ್ತು. ಎಡನೀರು ಕ್ಷೇತ್ರದಲ್ಲಿ ನಡೆದ ಕಳವಿನ ರೀತಿಯಲ್ಲಿ ಇಲ್ಲಿಯೂ ಕಳವು ನಡೆದಿದೆ. ಆದ್ದರಿಂದ ಒಂದೇ ತಂಡ ಎರಡು ಕಡೆಗಳಲ್ಲಿ ಕಳವು ನಡೆಸಿದೆಯೆಂದು ಸಂಶಯಿಸಲಾಗುತ್ತಿದೆ. ಈ ಕಳವು ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ಶೋಧ ಮುಂದುವರಿಯುತ್ತಿರುವಾಗಲೇ ಆದಿತ್ಯವಾರ ರಾತ್ರಿ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಆರಾಧನಾಲಯಗಳಲ್ಲಿ ಕಳವು ನಡೆದಿದೆ. ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಆರು ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ನಿರ್ಮಿತ ಶ್ರೀ ಅಯ್ಯಪ್ಪ ದೇವರ ಛಾಯಾಚಿತ್ರ ಹಾಗೂ ಕಾಣಿಕೆ ಹುಂಡಿಗಳಲ್ಲಿದ್ದ ಹಣವನ್ನು ಕಳವು ನಡೆಸಲಾಗಿದೆ. ನೆಲ್ಲಿಕಟ್ಟೆ ಶ್ರೀ ಗುರುದೇವ ಮಂದಿರದಲ್ಲೂ ಅದೇ ದಿನ ಕಾಣಿಕೆ ಹುಂಡಿ ಸಹಿತ ಹಣ ಕಳವು ನಡೆದಿದೆ. ಅಂದು ರಾತ್ರಿ ಪೊಯಿನಾಚಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲೂ ಕಳವು ನಡೆದಿದ್ದು, ಈ ಕಳವು ಕೃತ್ಯಗಳಲ್ಲಿ ಒಂದೇ ತಂಡ ಕಾರ್ಯಾಚರಿಸಿ ರಬಹುದೆಂಬ ಸಂಶಯ ಉಂಟಾಗಿದೆ.
ಇದೇ ವೇಳೆ ಕಳವು ನಡೆದ ಪ್ರದೇಶಗಳಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕೆಂಪು ಬಣ್ಣದ ಮಾರುತಿ ಸ್ವಿಫ್ಟ್ ಕಾರು ಸಂಚರಿಸುತ್ತಿತ್ತೆಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಕಳವಿಗೆ ಹೊಂಚು ಹಾಕುವ ಉದ್ದೇಶ ದಿಂದ ಈ ಕಾರು ಇಲ್ಲಿ ಸುತ್ತಾಡುತ್ತಿರ ಬಹುದೆಂದೂ ಅಂದಾಜಿಸಲಾಗಿದೆ. ಇದೇ ಸಂದರ್ಭದಲ್ಲಿ ಕಳವು ತಂಡ ಕರ್ನಾಟಕಕ್ಕೆ ಪರಾರಿಯಾದ ಬಗ್ಗೆಯೂ ಸಂಶಯವುಂಟಾಗಿದೆ. ಆ ವಿಷಯವನ್ನು ಖಚಿತಪಡಿಸಲು ಪೊಲೀಸರು ತನಿಖೆ ತೀವ್ರಗೊಳಿಸಿ ದ್ದಾರೆ. ಬಂಟ್ವಾಳ ಫರಂಗಿಪೇಟೆ ಸಜೀರು ಶ್ರೀ ದೇವಕಿಕೃಷ್ಣ ರವಳನಾಥ ಕ್ಷೇತ್ರದಲ್ಲಿ ಇದೇ ಮಾದರಿಯಲ್ಲಿ ಕಳವು ನಡೆದಿರುವುದೇ ಇಂತಹ ಸಂಶಯ ಸೃಷ್ಟಿಯಾಗಲು ಕಾರಣವಾಗಿದೆ. ಈ ಕ್ಷೇತ್ರದಿಂದ ಚಿನ್ನ, ಬೆಳ್ಳಿ ಹಾಗೂ ಕಾಣಿಕೆ ಹುಂಡಿಗಳಿಂದ ಹಣ ಕಳವು ನಡೆದಿದೆ.