ಆರಾಧನಾಲಯಗಳಲ್ಲಿ ಸುಡುಮದ್ದು ಪ್ರಯೋಗಕ್ಕೆ ನಿಷೇಧ: ಸರಕಾರ ಮೇಲ್ಮನವಿಯತ್ತ
ತಿರುವನಂತಪುರ: ಆರಾಧನಾಲಯಗಳಲ್ಲಿ ರಾತ್ರಿ ವೇಳೆ ಸುಡುಮದ್ದು ಪ್ರದರ್ಶನದ ಮೇಲೆ ನಿಷೇಧ ಹೇರಿದ ರಾಜ್ಯ ಹೈಕೋರ್ಟ್ನ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲ ರಾಜ್ಯ ಸರಕಾರ ಮತ್ತು ತಿರುವಿದಾಂಕೂರ್, ಕೊಚ್ಚಿ ಮತ್ತು ಮಲಬಾರ್ ಮುಜರಾಯಿ (ದೇವಸ್ವಂ) ಮಂಡಳಿಗಳು ತೀರ್ಮಾನಿಸಿವೆ.
ದೇವಸ್ಥಾನಗಳು, ನಂಬುಗೆಗಳು ಮತ್ತು ಆರಾಧನಾಲಯಗಳ ಹಿತಾಸಕ್ತಿಗಳನ್ನು ಸಂರಕ್ಷಿಸಬೇಕಾಗಿದೆ ಎಂದು ಮುಜರಾಯಿ ಸಚಿವ ರಾಧಾಕೃಷ್ಣನ್ ಸ್ಪಷ್ಟಪಡಿಸಿದ್ದಾರೆ.
ರಾತ್ರಿ ವೇಳೆಗಳಲ್ಲಿ ಸುಡುಮದ್ದು ಪ್ರದರ್ಶನ ಸಲ್ಲದೆಂದು ತೀರ್ಪಿನಲ್ಲಿ ತಿಳಿಸಲಾಗಿದ್ದರೂ, ಅದಕ್ಕೆ ಪೂರ್ಣ ರೂಪದ ಸ್ಪಷ್ಟತೆ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ಇಲ್ಲವೆಂದು ಸಚಿವರು ಹೇಳಿದ್ದಾರೆ. ಮುಜರಾಯಿ ಮಂಡಳಿಗಳು ಸಲ್ಲಿಸುವ ಮೇಲ್ಮನವಿಗಳಲ್ಲಿ ಕಕ್ಷಿದಾರರಾಗಿ ಹೈಕೋರ್ಟ್ ನೀಡಿರುವ ತೀರ್ಪು ಉತ್ಸವಗಳು ಮತ್ತು ಆರಾಧನಾಲಯಗಳ ಇತರ ಆಚರಣೆಗಳ ಮೇಲೂ ಪರಿಣಾಮ ಬೀರುವ ಆತಂಕವನ್ನು ರಾಜ್ಯವೂ ಸರಕಾರ ವ್ಯಕ್ತಪಡಿಸಿದೆ.
ಹೈಕೋರ್ಟ್ ತೀರ್ಪಿನ ವಿರುದ್ಧ ಎಂದು ಮೇಲ್ಮನವಿ ಸಲ್ಲಿಸಬೇಕೆಂಬುವುದನ್ನು ಮುಜರಾಯಿ ಮಂಡಳಿಗಳ ಸಭೆ ಕರೆದು ತೀರ್ಮಾನಿಸಲಾ ಗುವುದೆಂದು ತಿರುವಿದಾಂಕೂರ್ ಮುಜರಾಯಿ ಮಂಡಳಿ ಅಧ್ಯಕ್ಷ ಕೆ. ಅನಂತಗೋಪನ್ ಹೇಳಿದ್ದಾರೆ.
ಉತ್ಸವಗಳನ್ನು ದುಂದುವೆಚ್ಚ ವ್ಯಯಿಸಿ ಭಾರೀ ಅದ್ದೂರಿಯ ಆಚರಿಸುವುದನ್ನು, ನಿಯಂತ್ರಿಸಬಹುದಾಗಿದ್ದರೂ, ಸುಡುಮದ್ದು ಪ್ರಯೋಗವನ್ನು ಹೊರತುಪಡಿಸಲು ಸಾಧ್ಯವಾಗದೆಂದು ಮಲಬಾರ್ ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಆರ್. ಮುರಳಿ ಹೇಳಿದ್ದಾರೆ.