ಆರಿಕ್ಕಾಡಿಯಲ್ಲಿ ಮನೆಯಿಂದ ಬೆಲೆಬಾಳುವ ವಾಚ್ ಕಳವು
ಕುಂಬಳೆ: ಆರಿಕ್ಕಾಡಿಯಲ್ಲಿ ಬೀಗ ಜಡಿದ ಮನೆಗೆ ನುಗ್ಗಿದ ಕಳ್ಳರು ಬೆಲೆಬಾಳುವ ವಾಚ್‌ವೊಂದನ್ನು ದೋಚಿದ ಘಟನೆ ನಡೆದಿದೆ.
ಆರಿಕ್ಕಾಡಿ ಶ್ರೀ ಹನುಮಾನ್ ಕ್ಷೇತ್ರ ಸಮೀಪದ ದಿ| ಅಬ್ದುಲ್ ರಹಿಮಾನ್ ಎಂಬವರ ಪತ್ನಿ ನಫೀಸರ ಮನೆಗೆ ಕಳ್ಳರು ನುಗ್ಗಿದ್ದಾರೆ. ಎರಡು ದಿನಗಳ ಹಿಂದೆ ನಫೀಸ ಕುಟುಂಬ ಸಮೇತ ಸಂಬಂಧಿಕರ ಮನೆಗೆ ತೆರಳಿದ್ದರು. ಇಂದು ಮುಂಜಾನೆ ಮನೆಗೆ ಮರಳಿ ಬಂದಾಗಲೇ ಕಳವು ನಡೆದ ಬಗ್ಗೆ ಅರಿವಿಗೆ ಬಂದಿದೆ. ಬೆಡ್‌ರೂಂ ಕಪಾಟಿನಲ್ಲಿದ್ದ ಟಿಸೋಟ್ ವಾಚ್ ಕಳವಿಗೀಡಾದ ಬಗ್ಗೆ ತಿಳಿದುಬಂದಿದೆ. ಮನೆಯ ಅಡುಗೆ ಕೋಣೆ ಭಾಗದ ಬಾಗಿಲು ಮುರಿದು ಕಳ್ಳರು ಮನೆಯೊಳಗೆ ನುಗ್ಗಿದ್ದಾರೆಂದು ತಿಳಿಸಲಾಗಿದೆ. ಕಳವು ಬಗಗೆ ಲಭಿಸಿದ ದೂರಿನಂತೆ ಕುಂಬಳೆ ಪೊಲೀಸರು ಮನೆಗೆ ತಲುಪಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.