ಆರು ಅನಧಿಕೃತ ಹೊಯ್ಗೆ ಕಡವು ನಾಶಗೊಳಿಸಿದ ಪೊಲೀಸ್

ಕುಂಬಳೆ: ಒಳಯಂನಲ್ಲಿ ಅನಧಿಕೃತವಾಗಿ ಕಾರ್ಯಾಚರಿ ಸುತ್ತಿದ್ದ ಆರು ಹೊಯ್ಗೆ ಕಡವುಗಳನ್ನು ಪೊಲೀಸರು ನಾಶಗೊಳಿಸಿದ್ದಾರೆ. ಜೆಸಿಬಿ ಬಳಸಿ ಕಡವು ನಾಶಗೊ ಳಿಸಲಾಗಿದೆ. ಸರಕಾರಿ ಸ್ಥಳದಲ್ಲಿ ಕಡವುಗಳು ಕಾರ್ಯಾಚರಿಸುತ್ತಿದ್ದವು. ಅದರಿಂದ ಯಾರ ವಿರುದ್ಧವೂ ಕೇಸು ದಾಖಲಿಸಲು ಸಾಧ್ಯವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಡಿವೈಎಸ್ಪಿ ಪಿ.ಕೆ. ಸುಧಾಕರನ್, ಇನ್‌ಸ್ಪೆಕ್ಟರ್‌ಗಳಾದ ಇ ಅನೂಪ್ ಕುಮಾರ್, ಎಸ್‌ಐ ವಿ.ಕೆ. ಅನೀಶ್ ನೇತೃತ್ವ ನೀಡಿದರು.

You cannot copy contents of this page