ಆರು ಕೋಳಿಗಳನ್ನು ಕೊಂದು ಹಾಕಿದ ಅಜ್ಞಾತಜೀವಿ: ಮೂರು ಬೆಕ್ಕುಗಳೂ ನಾಪತ್ತೆ

ಕುಂಬಳೆ: ಪೆರುವಾಡ್ ಬದರಿ ಯಾ ನಗರದಲ್ಲಿ ಆರು ಕೋಳಿಗಳನ್ನು ಕೊಂದು ಹಾಕಿದ ಅಜ್ಞಾತ ಜೀವಿ ಯಾವುದೆಂದು ತಿಳಿದುಬಂದಿಲ್ಲ. ಅಲ್ಲದೆ ಮೂರು ಬೆಕ್ಕುಗಳು ಕೂಡಾ ನಿಗೂಢವಾಗಿ ನಾಪತ್ತೆಯಾಗಿದ್ದು, ಇದರಿಂದ ನಾಗರಿಕರಲ್ಲಿ ಆತಂಕ ತೀವ್ರಗೊಂಡಿದೆ.

ಕೋಟ ಮಸೀದಿ ಬಳಿಯ ಮಾಲಿಯಂಗರ ಮದೀನ ಮಂಜಿಲ್‌ನ ಮುಹಮ್ಮದ್ ಕುಂಞಿಯವರ ಕೋಳಿಗಳು ಅಜ್ಞಾತ ಜೀವಿಯ ದಾಳಿಯಿಂದ ಸಾವಿಗೀಡಾಗಿದೆ. ಮೊನ್ನೆ ರಾತ್ರಿ  ಮನೆ ಪರಿಸರದಲ್ಲಿ ನಾಯಿಗಳು ಬೊಗಳುವುದು ಹಾಗೂ ಯಾವುದೋ ವನ್ಯಜೀವಿಯ ಕೂಗು ಕೇಳಿಬಂದಿತ್ತೆನ್ನಲಾಗಿದೆ. ಇದರಿಂದ ಮನೆಯ ವರು ಭಯದಿಂದ ಹೊರಗಿಳಿದಿರಲಿಲ್ಲ. ನಿನ್ನೆ ಮುಂಜಾನೆ  ನೋಡಿ ದಾಗ ಕೋಳಿಗಳ ಗೂಡು ಹಾನಿಗೀಡಾದ ಹಾಗೂ ಕೋಳಿಗಳು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಂಚಾಯತ್‌ನಿಂದ ಲಭಿಸಿದ ಆರು ಕೋಳಿಗಳನ್ನು ಗೂಡಿನಲ್ಲಿಟ್ಟು ಸಾಕಲಾಗುತ್ತಿತ್ತು. ನಾಲ್ಕು ಕೋಳಿಗಳನ್ನು ಹೊಂದುಹಾಕಿ ತಲೆಯನ್ನು ಮಾತ್ರವೇ ತಿಂದ ಸ್ಥಿತಿಯಲ್ಲಿ ಕಂಡುಬಂದಿದೆ. ಅಲ್ಲದೆ ಇದೇ ಮನೆಯ ಮೂರು ಬೆಕ್ಕುಗಳೂ ನಾಪತ್ತೆಯಾಗಿವೆ. ಸಮೀಪದ ಬೇರೊಂದು ಗೂಡಿನಲ್ಲಿ 10 ಕೋಳಿಗಳಿದ್ದವು. ಆದರೆ ಆ ಗೂಡನ್ನು ಕೆಡವಲು  ಸಾಧ್ಯವಾಗಲಿಲ್ಲ. ಘಟನೆ ಬಗ್ಗೆ ಮನೆಯವರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.

RELATED NEWS

You cannot copy contents of this page