ಆರು ತಿಂಗಳ ಹಿಂದೆ ಎರ್ನಾಕುಳಂಗೆ ತೆರಳಿದ ವ್ಯಕ್ತಿ ನಾಪತ್ತೆ: ಮಾಹಿತಿ ಲಭಿಸಿದವರು ಪೊಲೀಸರಿಗೆ ತಿಳಿಸುವಂತೆ ವಿನಂತಿ

ಬದಿಯಡ್ಕ: ಆರು ತಿಂಗಳ ಹಿಂದೆ  ಎರ್ನಾಕುಳಂಗೆಂದು ತಿಳಿಸಿ ಹೋದ ವ್ಯಕ್ತಿ ನಾಪತ್ತೆ ಯಾಗಿರುವುದಾಗಿ ದೂರಲಾಗಿದೆ. ಬದಿಯಡ್ಕ ಬಳಿಯ ಬಾಂಜತ್ತಡ್ಕ ನಿವಾಸಿ ಸುರೇಂದ್ರನ್ (60) ಎಂಬವರು ನಾಪತ್ತೆಯಾಗಿ ರುವುದಾಗಿ ಬದಿಯಡ್ಕ ಪೊಲೀಸರಿಗೆ ಸಂಬಂಧಿಕರು ದೂರು ನೀಡಿದ್ದಾರೆ.  ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆರು ತಿಂಗಳ ಹಿಂದೆ ಸುರೇಂದ್ರನ್‌ರಿಗೆ ಎರ್ನಾಕುಳಂನಿಂದ ಫೋನ್ ಕರೆಯೊಂದು  ಬಂದಿತ್ತೆನ್ನಲಾಗಿದೆ. ಅನಂತರ ಎರ್ನಾಕುಳಂಗೆ ಹೋಗುವುದಾಗಿ ತಿಳಿಸಿ ಸುರೇಂದ್ರನ್ ತೆರಳಿದ್ದರು. ಬಳಿಕ ಅವರ ಕುರಿತು ಯಾವುದೇ ಮಾಹಿತಿ ಇಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ವೇಳೆ ಈ ವ್ಯಕ್ತಿಯ ಕುರಿತು ಯಾರಿಗಾದರೂ ಮಾಹಿತಿ ಲಭಿಸಿದಲ್ಲಿ ಬದಿಯಡ್ಕ ಪೊಲೀಸ್ ಠಾಣೆಗೆ ತಿಳಿಸಬೇಕಾಗಿ ಪೊಲೀಸರು ವಿನಂತಿಸಿದ್ದಾರೆ.

RELATED NEWS

You cannot copy contents of this page