ಆರು ತಿಂಗಳ ಹಿಂದೆ ನಾಪತ್ತೆಯಾದ ವ್ಯಕ್ತಿ ಮಾಹಿತಿ ಅಲಭ್ಯ: ಮತ್ತೆ ದೂರು

ಬದಿಯಡ್ಕ: ಆರು ತಿಂಗಳ ಹಿಂದೆ ನಾಪತ್ತೆಯಾದ ವ್ಯಕ್ತಿಯನ್ನು ಇದುವರೆಗೆ ಪತ್ತೆಹಚ್ಚಲಾಗದ ಹಿನ್ನೆಲೆಯಲ್ಲಿ ಮನೆಯವರು ಮತ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಕೇಸು ದಾಖಲಿಸಿಕೊಂಡ ಬದಿಯಡ್ಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬದಿಯಡ್ಕ ಬಳಿಯ ಬಾಂಜತ್ತಡ್ಕ ನಿವಾಸಿ ಸುರೇಂದ್ರನ್ (60) ಎಂಬವರು ನಾಪತ್ತೆಯಾದ ವ್ಯಕ್ತಿ. 2024 ಅಕ್ಟೋಬರ್ 13ರಂದು ಬೆಳಿಗ್ಗೆ 9 ಗಂಟೆಗೆ ಇವರು ಮನೆಯಿಂದ ಹೊರಗೆ ತೆರಳಿದ್ದರೆನ್ನಲಾಗಿದೆ. ಇವರು ಮನೆಯಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಿದ್ದರು. ಇವರು ನಾಪತ್ತೆಯಾದ ಬಗ್ಗೆ ಅಂದು ಮನೆಯವರು ಪೊಲೀಸರಿಗೆ ದೂರು ನೀಡಿದ್ದರೆನ್ನಲಾಗಿದೆ. ಆದರೆ ತನಿಖೆಯಲ್ಲಿ ಯಾವುದೇ ಪ್ರಯೋಜನವಾಗದ ಹಿನ್ನೆಲೆ

ಯಲ್ಲಿ ಇದೀಗ ಮತ್ತೆ ದೂರು ನೀಡಲಾಗಿದೆ.

ಸುರೇಂದ್ರನ್ ಮೂಲತಃ ತಲಶ್ಶೇರಿ ಪಾನೂರು ಮುಕೇರಿ ನಿವಾಸಿಯಾಗಿದ್ದು, ಕೆಲವು ವರ್ಷಗಳಿಂದ ಬಾಂಜತ್ತಡ್ಕದಲ್ಲಿ ವಾಸ ಆರಂಭಿಸಿದ್ದರು.

RELATED NEWS

You cannot copy contents of this page