ಆವರಣಗೋಡೆ ಕುಸಿದು ಬಿದ್ದು ಕಾರಿಗೆ ಹಾನಿ

ಕಾಸರಗೋಡು: ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಸಮೀಪದ ಖಾಸಗಿ ವ್ಯಕ್ತಿಯ ಆವರಣಗೋಡೆ ಕುಸಿದು ಬಿದ್ದ ಘಟನೆ ನೆಲ್ಲಿಕುಂಜೆ ಮುಹ್‌ಯಿದ್ದೀನ್ ಜುಮಾ ಮಸೀದಿ ರಸ್ತೆಯಲ್ಲಿ ನಡೆದಿದೆ. ನೆಲ್ಲಿಕುಂಜೆಯ ಸಮೀರ್‌ರ ಸ್ವಿಫ್ಟ್ ಡಿಸೈರ್ ಕಾರಿನ ಮೇಲೆ ನಿನ್ನೆ ಮಧ್ಯಾಹ್ನ ಗೋಡೆ ಬಿದ್ದಿದೆ. ಹಲವು ಮಂದಿ ಇಲ್ಲಿನ ಮಸೀದಿಗೆ ತೆರುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಆದರೆ ಅದೃಷ್ಟವಶಾತ್ ಯಾವುದೇ ಅಪಾಯವುಂಟಾಗಿಲ್ಲ. ಇಲ್ಲಿನ ದಿ| ಮಮ್ಮುಂಞಿ ಹಸೈನಾರ್‌ರ ಮಾಲಕತ್ವದಲ್ಲಿರುವ ಆವರಣಗೋಡೆ ಧಾರಾಕಾರ ಮಳೆ ಸುರಿಯುತ್ತಿದ್ದಾಗ ಕುಸಿದು ಬಿದ್ದಿದೆ. ಸಮೀಪದ ಮನೆಗೂ ಹಾನಿ ಸಂಭವಿಸಿರುವುದಾಗಿ ತಿಳಿಯಲಾಗಿದೆ.

You cannot copy contents of this page