ಆವಳ ಮಠದಲ್ಲಿ ರಂಗ ಚೇತನ ತಂಡದಿಂದ ನೃತ್ಯ ಚಿತ್ತಾರ

ಬಾಯಾರು: ನವರಾತ್ರಿ ಉತ್ಸವದ ಅಂಗವಾಗಿ ಆವಳ ಮಠ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದೇವಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಇವರ ಪ್ರಾಯೋಜಕತ್ವದಲ್ಲಿ ರಂಗ ಚೇತನ ಕಲಾ ತಂಡ ಕಾಸರಗೋಡು ಇವರಿಂದ ನೃತ್ಯ ಚಿತ್ತಾರ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ನೃತ್ಯ ಸಂಯೋಜಕ ಸದಾಶಿವ ಬಾಲಮಿತ್ರ, ರಂಗ ಚೇತನ ತಂಡದ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು, ಸದಸ್ಯರಾದ ವಸಂತ ಮಾಸ್ಟರ್ ಮೂಡಂಬೈಲ್, ಶಿವ ಮಾಸ್ಟರ್ ಚೆರುಗೊಳಿ, ಬಾಲಕೃಷ್ಣ ಗಾಳಿಯಡ್ಕ, ನಿತಿನ್ ಕನಿಲ, ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು, ಶ್ರೀ ದೇವಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ತಂಡದ ಸದಸ್ಯ ಶಶಿ ಕುಮಾರ್ ಕುಳೂರು ನಿರೂಪಿಸಿದರು.

RELATED NEWS

You cannot copy contents of this page