ತಿರುವನಂತಪುರ: ಗೌರವಧನ ಹೆಚ್ಚಿಸಬೇಕು, ನಿವೃತ್ತಿ ಸೌಲಭ್ಯವಾಗಿ 5 ಲಕ್ಷ ರೂಪಾಯಿ ನೀಡಬೇಕು ಮುಂತಾದ ಬೇಡಿಕೆಗಳನ್ನು ಮುಂದಿ ರಿಸಿಕೊಂಡು ಒಂದು ತಿಂಗಳಿಗಿಂತ ಲೂ ಹೆಚ್ಚು ಕಾಲದಿಂದ ಸೆಕ್ರೆಟರಿ ಯೇಟ್ ಮುಂದೆ ಸತ್ಯಾಗ್ರಹ ನಡೆಸುತ್ತಿರುವ ಆಶಾ ಕಾರ್ಯಕರ್ತೆ ಯರು ನಿನ್ನೆ ಸೆಕ್ರೆಟರಿ ಯೇಟ್ ಮುತ್ತಿಗೆ ಚಳವಳಿ ನಡೆಸಿದರು. 7 ಗಂಟೆಗಳ ಕಾಲ ನಡೆದ ಮುತ್ತಿಗೆ ಚಳವಳಿಯಿಂದಾಗಿ ತಿರುವನಂತಪುರ ನಗರದ ಎಂ.ಜಿ. ರೋಡ್‌ನಲ್ಲಿ ವಾಹನ ಸಂಚಾರ ಪೂರ್ಣವಾಗಿ ಮೊಟಕುಗೊಂಡಿತು.
ಚಳವಳಿ ಮುಂದುವರಿಯು ತ್ತಿದ್ದರೂ ರಾಜ್ಯ ಸರಕಾರದಿಂದ ಅನುಕೂಲ ಕ್ರಮ ಉಂಟಾಗದಿರು ವುದರಿಂದ ಚಳವಳಿಯನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಮುಂದಿನ ಹಂತವಾಗಿ ಗುರುವಾರ ಬೆಳಿಗ್ಗೆ 11ಕ್ಕೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸು ವುದಾಗಿ ಘೋಷಿಸಲಾಗಿದೆ. ನಿನ್ನೆ ನಡೆದ ಸೆಕ್ರೆಟರಿಯೇಟ್ ಮುತ್ತಿಗೆ ಚಳವಳಿಯ ಹೆಸರಲ್ಲಿ ಕಂಡರೆ ಪತ್ತೆಹಚ್ಚಬಹುದಾದ 5000 ಮಂದಿ ಆಶಾ ಕಾರ್ಯಕರ್ತೆ ಯರ ವಿರುದ್ಧ 8 ಕಾಯ್ದೆಗಳ ಪ್ರಕಾರ ಪೊಲೀಸರು ಕೇಸು ದಾಖಲಿಸಿದ್ದಾರೆ. ಸೆಕ್ರೆಟರಿ ಯೇಟ್ ಮುಂದೆ ಕಳೆದ ತಿಂಗಳ 10ರಂದು ಕೇರಳ ಆಶಾ ಹೆಲ್ತ್ ವರ್ಕರ್ಸ್ ಅಸೋಸಿ ಯೇಶನ್ ನೇತೃ ತ್ವದಲ್ಲಿ ಚಳವಳಿ ಆರಂಭಿಸ ಲಾಗಿತ್ತು. ಇದೇ ವೇಳೆ ಆಶಾ ಕಾರ್ಯಕರ್ತೆ ಯರಿಗೆ 7000 ರೂ. ಗೌರವಧನ ಲಭಿಸಲು ಏರ್ಪಡಿಸಿದ್ದ ನಿಬಂಧನೆ ಗಳನ್ನು ಸರಕಾರ ಹಿಂತೆಗೆದುಕೊಂಡಿದೆ.