ಆಶಾ ಕಾರ್ಯಕರ್ತೆಯರಿಂದ ಸೆಕ್ರೆಟರಿಯೇಟ್ ಮುಂದೆ ಉಪವಾಸ ಸತ್ಯಾಗ್ರಹ

ತಿರುವನಂತಪುರ: ರಾಜ್ಯದಲ್ಲ್ಲಿ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆ ಮುಂದಿರಿಸಿ ಸೆಕ್ರೆಟರಿಯೇಟ್ ಮುಂದೆ ಉಪಪಾಸ ಸತ್ಯಾಗ್ರಹ ಆರಂಭಿಸಿದ್ದಾರೆ.  ಇದೇ ವೇಳೆ  ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್  ದಿಲ್ಲಿಗೆ ತೆರಳಿದ್ದಾರೆ. ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚೆ ನಡೆಸುವ ಉದ್ದೇಶದಿಂದ ಸಚಿವೆ   ದೆಹಲಿಗೆ ತೆರಳಿರುವುದಾಗಿ ಹೇಳಲಾಗುತ್ತಿದೆ.

ಇದೇ ವೇಳೆ ರಾಜ್ಯ ಆರೋಗ್ಯ ಸಚಿವೆ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿ ಆಶಾ ಕಾರ್ಯಕರ್ತೆಯರು ರಂಗಕ್ಕಿಳಿ ದಿದ್ದಾರೆ. ಗೌರವಧನ ೨೧,೦೦೦ರೂ. ಗೇರಿಸಬೇಕೆಂಬ ಬೇಡಿಕೆಯಿಂದ ಹಿಂಜರಿಯುವುದಿಲ್ಲವೆಂದು ಚಳವಳಿಗೆ ನೇತೃತ್ವ ನೀಡುವ ಎಂ.ಎ. ಬಿಂದು, ಎಸ್. ಮಿನಿ ತಿಳಿಸಿದ್ದಾರೆ.  ಗೌರವಧನ ಹೆಚ್ಚಿಸಲು ಕೇಂದ್ರ ಸಚಿವರ ಅನುಮತಿ ಅಗತ್ಯವಿಲ್ಲ. ಅದಕ್ಕಾಗಿ ಸಚಿವೆ ದೆಹಲಿಗೆ ಹೋಗುವ ಅಗತ್ಯವಿಲ್ಲ ವೆಂದು ಅವರು ತಿಳಿಸಿದ್ದಾರೆ.ಕಳೆದ ಒಂದು  ತಿಂಗಳಿಗಿಂತ ಹೆಚ್ಚು ಕಾಲದಿಂದ ಆಶಾ ಕಾರ್ಯಕರ್ತೆ ಯರು ಸೆಕ್ರೆಟರಿಯೇಟ್ ಮುಂದೆ ಚಳವಳಿ ನಡೆಸುತ್ತಿದ್ದಾರೆ. ನಿನ್ನೆ ಆರೋಗ್ಯ ಸಚಿವೆಯೊಂದಿಗೆ ಚಳವಳಿ ನಿರತರು ನಡೆಸಿದ ಚರ್ಚೆ ವಿಫಲಗೊಂಡಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದ ಉಪವಾಸ ಸತ್ಯಾಗ್ರಹ  ಆರಂಭಿಸಲಾಗಿದೆ.

ಆಶಾ ಕಾರ್ಯಕರ್ತೆಯರು ಮುಂದಿರಿಸಿದ ಯಾವುದೇ ಬೇಡಿಕೆ ಅಂಗೀಕರಿಸದೆ ಚಳವಳಿ ಕೊನೆಗೊಳಿಸ ಬೇಕೆಂದು ಸಚಿವೆ ತಿಳಿಸಿದ್ದರು.

RELATED NEWS

You cannot copy contents of this page