ಆಸಿಫ್ ಅಸಹಜ ಸಾವು: ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಸಭೆ ನಾಳೆ

ಬಾಯಾರು : ಬಾಯಾರು ಗಾಳಿಯಡ್ಕದ ಟಿಪ್ಟರ್ ಚಾಲಕ ಮೊಹಮ್ಮದ್ ಆಸೀಫ್‌ರ ಅಸಹಜ ಸಾವಿನ ಬಗ್ಗೆ ಜಿಲ್ಲಾ ಕ್ರೈಂಬ್ರಾAಚ್  ನಡೆಸುತ್ತಿರುವ ತನಿಖೆಯಲ್ಲಿ ಜನರಿಗಿರುವ ಸಂಶಯ ದೂರೀಕರಿಸಲು ಹಾಗೂ ತನಿಖೆ ತ್ವರಿತಗೊಳಿಸಲು ಆಸೀಫ್‌ರ ಕುಟುಂಬಕ್ಕೆ ಸಹಾಯಧನ ಒದಗಿಸಲು ಸರಕಾರ ತಯಾರಾಗಬೇಕೆಂದು ಒತ್ತಾಯಿಸಿ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಾಳೆ ಸಂಜೆ 4 ಗಂಟೆಗೆ ಬಾಯಾರು ಪದವಿನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರದೀಪ್ ಕುಮಾರ್ ಭಾಗವಹಿಸುವರು ಎಂದು ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ತಿಳಿಸಿದೆ.

You cannot copy contents of this page