ಆಸ್ಪತ್ರೆಯಲ್ಲಿ ಯುವತಿ ಮೇಲೆ ಅತ್ಯಾಚಾರ ಯತ್ನ ವೈದ್ಯನ ಜನನಾಂಗ ಕತ್ತರಿಸಿ ಪಾರಾದ ಯುವತಿ

ಪಾಟ್ನಾ: ದಾದಿಯಾದ ಯುವತಿ ಯನ್ನು ವೈದ್ಯ ಸಹಿತ ಮೂರು ಮಂದಿ ಆಸ್ಪತ್ರೆಯೊಳಗೆ ಅತ್ಯಾಚಾರಗೈಯ್ಯಲು ಯತ್ನಿಸಿದ್ದು, ಈ ವೇಳೆ ಯುವತಿ  ವೈದ್ಯನ ಜನನಾಂಗ ಕತ್ತರಿಸಿ ಅಪಾಯದಿಂದ ತಪ್ಪಿಸಿಕೊಂಡಿದ್ದಾಳೆ. 

ಬಿಹಾರದ ಸಮಸ್ತಿಪುರ್ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ವೈದ್ಯ ಹಾಗೂ ಆತನ ಇಬ್ಬರು ಸ್ನೇಹಿತರು ಸೇರಿ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾರೆ. ಮೊನ್ನೆ ರಾತ್ರಿ ಕೆಲಸ ಮುಗಿಸಿ ಯುವತಿ ಮನೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಂತೆ ಆಕೆಯ ಕೊಠಡಿಗೆ ನುಗ್ಗಿದ ಅಕ್ರಮಿಗಳು ಆಕೆ ಮೇಲೆ ದಾಳಿಗೆ ಮುಂದಾಗಿದ್ದಾರೆ.  ಕೂಡಲೇಯುವತಿ ವೈದ್ಯನ ಜನನೇಂದ್ರಿಯವನ್ನು ಬ್ಲೇಡ್‌ನಿಂದ ಇರಿದಿದ್ದಾಳೆ.  ಕೂಡಲೇ ಅಲ್ಲಿಂದ ಓಡಿ ಪಾರಾದ ಯುವತಿ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. ಪೊಲೀಸರು ತಲುಪಿ ಆರೋಪಿಗಳಾದ ಮೂವರನ್ನು ಬಂಧಿಸಿದ್ದಾರೆ.  ಆಸ್ಪತ್ರೆಯ ಆಡಳಿ ತಾಧಿಕಾರಿ ಡಾ| ಸಂಜಯ್ ಕುಮಾರ್ , ಸುನಿಲ್ ಕುಮಾರ್ ಗುಪ್ತ, ಅವದೇಶ್ ಕುಮಾರ್ ಎಂಬಿವರು ಸೆರೆಗೀಡಾದ ಆರೋಪಿಗಳಾಗಿದ್ದಾರೆ. ಯುವತಿ ಮೇಲೆ ದಾಳಿ ನಡೆಸುವ ಮೊದಲು ವೈದ್ಯ ಹಾಗೂ ತಂಡ ಆಸ್ಪತ್ರೆಯ ಕೊಠಡಿಯನ್ನು ಒಳಗಿನಿಂದ ಮುಚ್ಚುಗಡೆಗೊಳಿಸಿದ್ದರು. ಆರೋಪಿಗಳು ಮದ್ಯದಮಲಿನಲ್ಲಿದ್ದರೆಂದೂ ಹೇಳಲಾಗುತ್ತಿದೆ.

ಇಲ್ಲಿನ ಸಿಸಿ ಕ್ಯಾಮರಾಗಳನ್ನು ಆಫ್ ಮಾಡಿದ ಬಳಿಕ ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ. ಆಸ್ಪತ್ರೆಯಿಂದ ಅರ್ಧ ಬಾಟ್ಲಿ ಮದ್ಯ, ಯುವತಿ ವೈದ್ಯನ ಜನನಾಂಗ ಕತ್ತರಿಸಲು ಬಳಸಿದ ಬ್ಲೇಡ್, ರಕ್ತಸಿಕ್ತ ಬಟ್ಟೆಬರೆಗಳು, ಮೂರು  ಮೊಬೈಲ್ ಫೋನ್ ಮೊದಲಾದವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

RELATED NEWS

You cannot copy contents of this page