ಆಹಾರ ಸಾಮಗ್ರಿ ಸಂಗ್ರಹ: ಅವ್ಯವಹಾರ ಬಗ್ಗೆ ತನಿಖೆಗೆ ಬಿಜೆಪಿ ಆಗ್ರಹ

ಮಂಗಲ್ಪಾಡಿ: ಪಂಚಾಯತ್ ವತಿಯಿಂದ ವಯನಾಡು ಸಂತ್ರಸ್ತರಿಗೆ ಸಂಗ್ರಹಿಸಿದ ಆಹಾರ ವಸ್ತುಗಳು, ಬಟ್ಟೆಬರೆಗಳು ಹಾಗೂ ಇತರ ಸಾಮಗ್ರಿಗಳು ಹಲವು ತಿಂಗಳು ಪಂಚಾಯತ್‌ನಲ್ಲೇ ಉಳಿದಿದ್ದು, ಆದರೆ ಇದನ್ನು ಸಂತ್ರಸ್ತರಿಗೆ ನೀಡಲಾಗಿದೆ ಎಂದು ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರಿಂದ ಸಂಗ್ರಹಿಸಿದ ಈ ಸಾಮಗ್ರಿಗಳು ಸಂತ್ರಸ್ತರಿಗೆ ಲಭಿಸಿಲ್ಲವೆಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಈ ಬಗ್ಗೆ ವಿಜಿಲೆನ್ಸ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಸಭೆಯಲ್ಲಿ ಆಗ್ರಹಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page