ಆಹಾರ ಸುರಕ್ಷತಾ ಕಚೇರಿಗಳಿಗೆ ವಿಜಿಲೆನ್ಸ್ ದಾಳಿ: ಹಲವು ರೀತಿಯ ಅವ್ಯವಹಾರ ಪತ್ತೆ
ಕಾಸರಗೋಡು: ಕಾಸರಗೋಡು ಸೇರಿದಂತೆ ರಾಜ್ಯಾದ್ಯಂತವಾಗಿ ಆಹಾರ ಸುರಕ್ಷತಾ ಕಚೇರಿಗಳಿಗೆ ರಾಜ್ಯ ಜಾಗ್ರತಾದಳ ನಿನ್ನೆ ಏಕಕಾಲದಲ್ಲಿ ದಾಳಿ ನಡೆಸಿದೆ.
ಕಾಸರಗೋಡು, ನೀಲೇಶ್ವರ, ಸುಲ್ತಾನ್ ಬತ್ತೇರಿ, ಮಂಜೇರಿ, ತಿರೂರು, ಕೋಟಕ್ಕಲ್ ಮತ್ತು ಮಲಪ್ಪುರಂನಲ್ಲಿ ಆಹಾರ ಸುರಕ್ಷತಾ ತಂಡ ನಡೆಸಿದ ದಾಳಿ ಮತ್ತು ಪರಿಶೀ ಲನೆಯಲ್ಲಿ ಲೈಸನ್ಸ್ ಇಲ್ಲದ ಹಾಗೂ ಲೈಸನ್ಸ್‌ನ ನಿಗದಿತ ಅವಧಿ ಕಳೆದ ಹಲವು ಹೋಟೆಲ್‌ಗಳು ಕಾರ್ಯವೆಸ ಗುತ್ತಿರುವುದು ಪತ್ತೆಹಚ್ಚಲಾಗಿದೆ. ರಾಜ್ಯಾದ್ಯಂತವಾಗಿ ಇತರ ಜಿಲ್ಲೆಗಳಲ್ಲೂ ನಡೆದ ವಿಜಿಲೆನ್ಸ್ ದಾಳಿಯಲ್ಲಿ ೧೨ ಲಕ್ಷ ರೂ.ಗಿಂತಲೂ ಹೆಚ್ಚು ವಾರ್ಷಿಕ ವ್ಯವಹಾರ ಹೊಂದಿರುವ ಆಹಾರ ಉತ್ಪಾದನಾ ಸಂಸ್ಥೆಗಳಿಗೆ ಲೈಸನ್ಸ್ ನೀಡುವುದರ ಬದಲಾಗಿ ಅಂತಹ ಸಂಸ್ಥೆಗಳಿಗೆ ಕಿರುವ್ಯಾಪಾರ ಲೈಸನ್ಸ್ ನೀಡಿರುವುದನ್ನು ಪತ್ತೆಹಚ್ಚಲಾಗಿದೆ. ಇಂತಹ ಕ್ರಮದಿಂದ ಲೈಸನ್ಸ್ ಶುಲ್ಕ ವತಿಯಿಂದ ಸರಕಾರಕ್ಕೆ ಲಭಿಸಬೇಕಾಗಿರುವ ಭಾರೀ ಆದಾಯ ನಷ್ಟ ಉಂಟಾಗಿದೆಯೆಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಯಾಂಪಲ್ ಪರೀಕ್ಷಾ ವರದಿ ಆಧಾರದಲ್ಲಿ ಆಹಾರ ಉತ್ಪಾದಕ ಸಂಸ್ಥೆಗಳಿಂದ ಜುಲ್ಮಾನೆ ವಸೂಲಿ ಮಾಡುವ ವಿಷಯದಲ್ಲಿ ವಿಳಂಬ ಉಂಟುಮಾಡಿ ಅವರನ್ನು ಕಾನೂನು ಕ್ರಮಗಳಿಂದ ರಕ್ಷಿಸುವಂತೆ ಮಾಡುವ ಯತ್ನ ನಡೆಸಿರುವುದನ್ನು ವಿಜಿಲೆನ್ಸ್ ಪತ್ತೆಹಚ್ಚಿದೆ. ಇದರ ಹೊರತಾಗಿ ಇತರ ಹಲವು ಅವ್ಯವಹಾರಗಳನ್ನು ಪತ್ತೆಹಚ್ಚಲಾಗಿದೆ.