ಇಚ್ಲಂಗೋಡು ಶಾಲೆಯ ಮುಖ್ಯೋಪಾಧ್ಯಾಯ ಹೃದಯಾಘಾತದಿಂದ ನಿಧನ

ಕುಂಬಳೆ: ಇಚ್ಲಂಗೋಡು ಇಸ್ಲಾಮಿಯ ಎಎಲ್‌ಪಿ ಶಾಲೆಯ ಮುಖ್ಯೋಪಾಧ್ಯಾಯ ಪಿಲಿಕೋಡ್ ವರಕ್ಕೋಡ್ ವಯಲ್ ನಿವಾಸಿ ಎ. ರಂಜಿತ್ (೪೯) ಹೃದಯಾಘಾತ ದಿಂದ ನಿಧನ ಹೊಂದಿದರು. ಇಂದು ಮುಂಜಾನೆ ಮೂರು ಗಂಟೆ ವೇಳೆ ಚೆರ್ವತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಅಂತ್ಯ ಸಂಭವಿಸಿದೆ. ನಿಧನದ ಹಿನ್ನೆಲೆ ಯಲ್ಲಿ ಇಂದು ನಡೆಯಬೇಕಾಗಿದ್ದ ಶಾಲಾ ವಾರ್ಷಿಕೋತ್ಸವವನ್ನು ಶನಿವಾರಕ್ಕೆ ಮುಂದೂಡಲಾಗಿದ್ದು, ಇಂದು ಶಾಲೆಗೆ ರಜೆ ಸಾರಲಾಗಿದೆ.

ಮೃತರು ತಂದೆ ಕುಂಞಿಕಣ್ಣ, ತಾಯಿ ಯಶೋದಾ, ಪತ್ನಿ ಪ್ರಮೀಳಾ (ಅಧ್ಯಾಪಿಕೆ), ಮಕ್ಕಳಾದ ಪ್ರಿಯನಂದ, ಗೌರಿನಂದ, ಸಹೋದರಿಯರಾದ ಗೀತಾ, ರಜನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page