ಇಬ್ಬರು ಬಾಲಕರಿಗೆ ಲಾಡ್ಜ್ನಲ್ಲಿ ಸಲಿಂಗರತಿ ಕಿರುಕುಳ: ಆರೋಪಿಗಳು ಪೊಲೀಸ್ ಕಸ್ಟಡಿಗೆ;ಆದೂರು ಪೊಲೀಸರಿಂದ ತನಿಖೆ ಆರಂಭ
ಮುಳ್ಳೇರಿಯ: ಪ್ರಾಯ ಪೂರ್ತಿ ಯಾಗದ ಬಾಲಕನನ್ನು ಕಾರಿನಲ್ಲಿ ಕರೆದೊಯ್ದು ಕಾಸರಗೋಡಿನ ಲಾಡ್ಜ್ನಲ್ಲಿ ಸಲಿಂಗರತಿ ಕಿರುಕುಳ ನೀಡಲಾಯಿತೆಂಬ ದೂರಿನಂತೆ ಆದೂರು ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ತನಿಖೆಯಂಗವಾಗಿ ಇಬ್ಬರನ್ನು ಕಸ್ಟಡಿಗೆ ತೆಗೆಯಲಾಗಿದೆ. ಇದೇ ವೇಳೆ ತನ್ನನ್ನು ಹನಿಟ್ರಾಪ್ನಲ್ಲಿ ಸಿಲುಕಿಸಿ ಹಣ ಲಪಟಾಯಿಸಲಾ ಯಿತೆಂದು ಪ್ರಕರಣದ ಆರೋಪಿ ಗಳಲ್ಲೋರ್ವ ಪೊಲೀಸರಲ್ಲಿ ತಿಳಿಸಿದ್ದಾನೆ.
ಕಳೆದ ತಿಂಗಳು ನಡೆದ ಘಟನೆ ಕುರಿತು ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ-“ಹದಿನೇಳರ ಹರೆಯದ ಬಾಲಕನನ್ನು ಕಸ್ಟಡಿಯ ಲ್ಲಿರುವ ಯೂಸಫ್ ಮದಕ್ಕ (50) ಎಂಬಾತ ಬಸ್ನಲ್ಲಿ ಪ್ರಯಾ ಣ ವೇಳೆ ಪರಿಚಯಗೊಂಡಿದ್ದನು. ಈ ವೇಳೆ ಬಾಲಕನಿಗೆ ಎಂಡಿಎಂಎ ನೀಡುವುದಾಗಿ ತಿಳಿಸಿದ್ದು, ಅನಂತರ ಅವರಿಬ್ಬರು ಮುಳ್ಳೇರಿಯದಲ್ಲಿ ಬಸ್ನಿಂದಿಳಿದಿದ್ದಾರೆ. ಬಳಿಕ ಕಾರಿನಲ್ಲಿ ವಿವಿಧ ಭಾಗಗಳಿಗೆ ತೆರಳಿ ಕಾಸರಗೋಡಿಗೆ ತಲುಪಿದ್ದಾರೆ. ಅಲ್ಲಿನ ಲಾಡ್ಜ್ವೊಂದರಲ್ಲಿ ಕೊಠಡಿ ಪಡೆದ ಬಳಿಕ ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಲಾಗಿದೆ. ಈ ವೇಳೆ ಬಾಲಕನ ಹದಿನಾರರ ಹರೆಯದ ಸ್ನೇಹಿತನನ್ನೂ ಫೋನ್ ಕರೆ ಮಾಡಿ ಲಾಡ್ಜ್ನ ಕೊಠಡಿಗೆ ಕರೆಸಿ ಆತನಿಗೂ ಕಿರುಕುಳ ನೀಡಲಾಗಿದೆ. ಈ ಮಧ್ಯೆ ಸ್ಥಳಕ್ಕೆ ತಲುಪಿದ ಜುನೈದ್ (27) ಎಂಬಾತ ಕಿರುಕುಳದ ದೃಶ್ಯವನ್ನು ಚಿತ್ರೀಕರಿಸಿದ್ದಾನೆ. ಇದರಿಂದ ಜುನೈದ್ನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಈತನ ನೇತೃತ್ವದಲ್ಲಿ ತನ್ನ ೫೦ ಸಾವಿರ ರೂಪಾಯಿಯನ್ನು ಲಪಟಾಯಿಸಿ ರುವುದಾಗಿ ಯೂಸಫ್ ತಿಳಿಸಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಬಂಧನ ದಾಖಲಿಸುವು ದರೊಂದಿಗೆ ಇನ್ನಷ್ಟು ಮಾಹಿತಿಗಳು ಬಹಿರಂಗಗೊಳ್ಳ ಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.