ಇಬ್ಬರು ಮಾವೋವಾದಿಗಳ ಸೆರೆ : ಓರ್ವನಿಗೆ ಗುಂಡೇಟು; ಮೂವರು ಪರಾರಿ

ಕಾಸರಗೋಡು: ಮಾನಂತವಾಡಿ ದಟ್ಟಾರಣ್ಯದಲ್ಲಿ  ಮಾವೋವಾದಿಗಳ ಗುಪ್ತ ಚಟುವಟಿಕೆಗಳು ನಡೆಯುತ್ತಿವೆ ಯೆಂಬ ಬಗ್ಗೆ  ಖಚಿತ ಮಾಹಿತಿ ಲಭಿಸಿ ದನ್ವಯ ಅದನ್ನು ಪತ್ತೆಹಚ್ಚಲು ಕೇರಳ ಪೊಲೀಸರ ವಿಶೇಷ ತಂಡವಾದ ತಂ ಡರ್ ಬೋಲ್ಟ್ ಪಡೆ ಕಾರ್ಯಾ ಚರಣೆಗಿಳಿದಾಗ ಅವರು ಮತ್ತು ಮಾವೋ ವಾದಿಗಳ ಮಧ್ಯೆ ಪರಸ್ಪರ  ಗುಂಡಿನ ಚಕಮಕಿ ನಡೆದಿದ್ದು, ಅದರಲ್ಲಿ ಓರ್ವ ಮಾವೋವಾದಿಗೆ ಗುಂಡೇಟು ತಗಲಿದೆ. ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದು,   ಮೂವರು  ಮಾವೋ ವಾದಿಗಳು ಪರಾರಿಯಾಗಿದ್ದಾರೆ.

ಚಂದ್ರ ಮತ್ತು ಉಣ್ಣಿಮಾಯಾ ಎಂಬವರು ಪೊಲೀಸರ ವಶಕ್ಕೊಳಗಾದ ಮಾವೋವಾದಿಗಳಾಗಿದ್ದಾರೆ. ಇವರ ಪತ್ತೆಗಾಗಿ ಪೊಲೀಸರು ವರ್ಷಗಳ ಹಿಂದೆಯೇ ಲುಕ್‌ಔಟ್ ನೋಟೀಸನ್ನು ಜ್ಯಾರಿಗೊಳಿಸಿದ್ದರು. ಸೆರೆಗೊಳಗಾದ ಈ ಇಬ್ಬರನ್ನು ಕಲ್ಪೆಟ್ಟಾ ಸಶಸ್ತ್ರ ಮೀಸಲು ಪೊಲೀಸ್ ಕ್ಯಾಂಪ್‌ಗೆ ಸಾಗಿಸಲಾಗಿದ್ದು, ಅಲ್ಲಿ ಅವರನ್ನು ತೀವ್ರ ವಿಚಾ ರಣೆಗೊಳಪಡಿಸಲಾಗುತ್ತಿದೆ.

 ಮಾನಂತವಾಡಿ ಪೇರಿಯ ಚಪ್ಪಾರಂನ ದಟ್ಟಾರಣ್ಯದಲ್ಲಿ ನಿನ್ನೆ ರಾತ್ರಿ ಈ ಗುಂಡಿನ ಚಕಮಕಿ ನಡೆದಿದೆ. ಚಪ್ಪಾರತ್ ಕಾಲನಿ ನಿವಾಸಿ ಅನೀಶ್ ತಂಬಿ ಎಂಬವರ ಮನೆಗೆ ನಿನ್ನೆ ಸಂಜೆ ಮಾವೋವಾದಿಗಳ ತಂಡ ಬಂದಿತ್ತು. ಆಬಗ್ಗೆ ಖಚಿತ ಮಾಹಿತಿ ಲಭಿಸಿದ ತಂಡರ್ ಬೋಲ್ಡ್ ಪೊಲೀಸರ ಪಡೆ ನಿನ್ನೆ ರಾತ್ರಿ ಅಲ್ಲಿಗೆ ಆಗಮಿಸಿ  ಆ ಇಡೀ ಪ್ರದೇಶವನ್ನೇ ಸುತ್ತುವರಿದು ಶರಣಾಗು ವಂತೆ ಅಲ್ಲಿದ್ದ ಮಾವೋವಾದಿಗಳಿಗೆ ನಿರ್ದೇಶ ನೀಡಿದೆ. ಮಾತ್ರವಲ್ಲ ಪೊಲೀ ಸರು ಆಕಾಶಕ್ಕೂ ಗುಂಡು ಹಾರಿಸಿದ್ದಾರೆ. ಆದರೆ ಪೊಲೀಸರ ಆದೇಶಕ್ಕೆ ತಲೆಬಾಗದ ಮಾವೋವಾದಿಗಳೂ ಪೊಲೀಸರತ್ತ  ಗುಂಡು ಹಾರಿಸಿ ಅಲ್ಲಿಂದ ತಪ್ಪಿಸಿಕೊಳ್ಳಲೆತ್ನಿಸಿದಾಗ ಅದರಲ್ಲಿದ್ದ ಓರ್ವ ಪೊಲೀಸರ ಗುಂಡು ತಗಲಿ ಗಾಯಗೊಂಡಿದ್ದಾನೆ. ಆತ ಯಾರು ಎಂಬುವುದು ಪೊಲೀಸರಿಗೆ ಇನ್ನೂ ತಿಳಿದುಬಂದಿಲ್ಲ. ಗಾಯದ ಮಧ್ಯೆ ಆತ ಅಲ್ಲಿಂದ  ತಪ್ಪಿಸಿಕೊಂಡು ಪರಾರಿಯಾಗಿ ದ್ದಾನೆ. ಮಾತ್ರವಲ್ಲ ಮಾವೋವಾದಿಗಳು ಬಂದಿದ್ದ  ಮನೆ ಮಾಲಕ ಮೂಲತಃ ತಮಿಳುನಾಡು ನಿವಾಸಿ ಅನೀಶ್ ತಂಬಿ (೫೭)ಯನ್ನು ಕೇರಳ ಪೊಲೀಸ್ ಇಲಾಖೆಯ ಮಾವೋ ಸ್ಪೆಷಲ್ ಆಪರೇಶನ್ ಗ್ರೂಪ್  (ಎಸ್ ಒಜಿ) ಕಲ್ಲಿಕೋಟೆ ಸಮೀಪದ ಎರಮಂಗಲದಿಂದ ನಂತರ ವಶಕ್ಕೆ ತೆಗೆದುಕೊಂಡಿದೆ.

ಮಾವೋವಾದಿಗಳಿಗೆ ಅಗತ್ಯದ ಸೌಕರ್ಯಗಳನ್ನು ಒದಗಿಸಿಕೊಡುವ ಮತ್ತು  ಅವರಿಗೆ ಪೊಲೀಸರ ಚಲನ ವಲನಗಳ ಬಗ್ಗೆ ಮಾಹಿತಿ ನೀಡುವ ‘ಕುರಿಯನ್’ ಎಂಬ ಹೆಸರಿನ ತಂಡವೊಂದು  ರಾಜ್ಯದಾದ್ಯಂತ ಕಾರ್ಯವೆಸಗುತ್ತಿದ್ದು, ಬಂಧಿತ  ಅನೀಶ್ ತಂಬಿ ಆ ಸಂಘಟನೆಯ ಸದಸ್ಯನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಕೈಯಿಂದ ತಪ್ಪಿಸಿ ಪರಾರಿಯಾದ ಇತರ ಮಾವೋವಾ ದಿಗಳು ಮತ್ತು ಗುಂಡೇಟಿನಿಂದ ಗಾಯಗೊಂಡ ಮಾವೋವಾದಿಯ ಪತ್ತೆಗಾಗಿ ಮಾನಂತವಾಡಿ ದಟ್ಟಾರಣ್ಯ ದಾದ್ಯಂತ ಪೊಲೀಸರು ಮತ್ತು ತಂಡರ್ ಬೋಲ್ಟ್ ಪಡೆ ವ್ಯಾಪಕ ಶೋಧ ಆರಂಭಿಸಿದೆ. ಇದಕ್ಕಾಗಿ ಕಾಸರಗೋಡು ಜಿಲ್ಲೆಯ ಮೂರು ಪೊಲೀಸ್ ಸಬ್ ಡಿವಿಶನ್‌ಗಳಿಂದಾಗಿ ತಲಾ ೧೦ರಂತೆ ಒಟ್ಟು ೩೦ ಪೊಲೀಸರು ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ೨೦ ಪೊಲೀಸರೂ ಸೇರಿದಂತೆ ಒಟ್ಟು ೫೦ ಮಂದಿಯನ್ನು ಮಾನಂತವಾಡಿಗೆ ಕಳುಹಿಸಿಕೊಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page