ಇರಿಯಣ್ಣಿ ಬಳಿ ಚಿರತೆ ಕಾಟ: ಕಾಲ್ಗುರುತು ಪತ್ತೆ
ಬೋವಿಕ್ಕಾನ: ಇರಿಯಣ್ಣಿ ಸಮೀಪದ ಚೆಟ್ಟುತ್ತೋಡಿನಲ್ಲಿ ಚಿರತೆ ಕಾಟ ತಲೆದೋರಿದೆ. ಇಲ್ಲಿನ ಅನಿಲ್ ಕುಮಾರ್ ಎಂಬವರತೋಟದಲ್ಲಿ ಚಿರತೆಯ ಕಾಲ್ಗುರುತುಗಳು ಪತ್ತೆಯಾಗಿವೆ. ಇದರ ಹೊರತಾಗಿ ಅಲ್ಲೇ ಪಕ್ಕದ ಇತರ ಹಲವು ತೋಟಗಳಲ್ಲೂ ಕೆಸರಿನಲ್ಲಿ ಚಿರತೆಯ ಕಾಲ್ಗುರುತುಗಳು ಪತ್ತೆಯಾಗಿವೆ.
ಇರಿಯಣ್ಣಿ ಮತ್ತು ಪರಿಸರ ಪ್ರದೇಶಗಳಲ್ಲಿ ಚಿರತೆಗಳ ಕಾಟ ಉಂಟಾಗಿರುವ ಹಿನ್ನೆಲೆಯಲ್ಲಿ ಅದನ್ನು ಪತ್ತೆಹಚ್ಚಲು ಲಕ್ಷಾಂತರ ರೂ. ವ್ಯಯಿಸಿ ಅರಣ್ಯ ಇಲಾಖೆ ಈ ಪ್ರದೇಶದ ನಾಲ್ಕೆಡೆಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಿದೆ. ಆದರೆ ಅದರಲ್ಲಿ ಚಿರತೆ ಚಿತ್ರ ಈ ತನಕ ಗೋಚರಿಸಿಲ್ಲವೆಂದು ಕಾಸರಗೋಡು ಅರಣ್ಯ ರೇಂಜ್ ಅಧಿಕಾರಿ ಸಿ.ವಿ. ವಿನೋದ್ ಕುಮಾರ್ ಹೇಳಿದ್ದಾರೆ.
ಇರಿಯಣ್ಣಿಗೆ ಸಮೀಪದ ಕುಣಿಯೇರಿಯಲ್ಲಿ ಎgಡು ದಿನಗಳ ಹಿಂದೆ ಚಿರತೆಯೊಂದು ಪತ್ತೆಯಾಗಿತ್ತು. ಆ ಪ್ರದೇಶದಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಚೆಟ್ಟು ತೋಡಿನಲ್ಲಿ ಚಿರತೆಯ ಕಾಲ್ಗುರುತು ನಿನ್ನೆ ಪತ್ತೆಯಾಗಿದೆ. ಚಿರತೆ ಹಾವಳಿ ಇಂಟಾಗಿರುವುದು ಕುಣಿಯೇರಿ, ಮೀನಂಕುಳಂ, ಚೆಟ್ಟುತ್ತೋಡು, ಬೇಪು ಮತ್ತು ಪರಿಸರ ಪ್ರದೇಶದ ಜನರಲ್ಲಿ ಭಾರೀ ಭೀತಿಯ ವಾತಾವರಣ ಆವರಿಸುವಂತೆ ಮಾಡಿದೆ. ರಾತ್ರಿ ವೇಳೆಯಲ್ಲಿ ಜನರು ಮನೆಯಿಂದ ಹೊರಗಿಳಿಯಲು ಜನರು ಭಯ ಪಡತೊಡಗಿದ್ದಾರೆ. ಈ ಪರಿಸರದ ಕ್ಯಾಮರಾದಲ್ಲಿ ಕೆಲವು ದಿನಗಳ ಹಿಂದೆ ಚಿರತೆ ದೃಶ್ಯ ಗೋಚರಿಸಿತ್ತು. ಸಾಕು ಪ್ರಾಣಿಗಳನ್ನೇ ಹೆಚ್ಚಾಗಿ ಚಿರತೆ ದಾಳಿ ನಡೆಸಿ ಕೊಂದು ತಿನ್ನುತ್ತವೆ. ಇದರಿಂದಾಗಿ ಈ ಪ್ರದೇಶದ ಜನರು ತಮ್ಮೊಂದಿಗೆ ಸಾಕು ಪ್ರಾಣಿಗಳಿಗೂ ಸಂರಕ್ಷಣೆಗೆ ಬೇಕಾದ ಸ್ಥಿತಿಯೂ ಇನ್ನೊಂದೆಡೆ ನಿರ್ಮಾಣವಾಗಿದೆ.