ಇಲಿಜ್ವರಕ್ಕೆ ರಾಜ್ಯದಲ್ಲಿ ಈವರ್ಷ 152 ಮಂದಿ ಬಲಿ

ಕಾಸರಗೋಡು: ಇತರ ಸಾಂಕ್ರಾ ಮಿಕ ರೋಗಗಳಂತೆ ಕೇರಳದಲ್ಲಿ ಇಲಿಜ್ವರವೂ  ವ್ಯಾಪಕವಾಗಿ ಕಾಣಿಸಿ ಕೊಳ್ಳುತ್ತಿದೆ. ಲೆಕ್ಕಾಚಾರ ಪ್ರಕಾರ ರಾಜ್ಯದಲ್ಲಿ ಈ ವರ್ಷ ಈತನಕ 152 ಮಂದಿ ಇಲಿಜ್ವರ ತಗಲಿ ಸಾವನ್ನಪ್ಪಿ ದ್ದಾರೆ. ಆದರೆ 76 ಮಂದಿ  ಮಾತ್ರವೇ ಇಲಿಜ್ವರಕ್ಕೆ ಬಲಿ ಯಾಗಿದ್ದಾರೆಂಬುದು ಸರಕಾರದ ಲೆಕ್ಕಾಚಾರವಾಗಿದೆ.

ಜುಲೈ ತಿಂಗಳಲ್ಲಿ ಮಾತ್ರವಾಗಿ ರಾಜ್ಯದಲ್ಲಿ 24 ಮಂದಿ ಇಲಿಜ್ವರ ದಿಂದ ಪ್ರಾಣ ಕಳೆದುಕೊಂಡಿದ್ದಾರೆ.  ಈ ವರ್ಷ ಈತನಕ ಮಾತ್ರವಾಗಿ 1,368 ಮಂದಿಗೆ ಇಲಿಜ್ವರ ತಗಲಿ ದೆಯೆಂದು ಖಾತರಿಪಡಿಸಲಾಗಿದೆ. ಇನ್ನು 1170 ಮಂದಿಯಲ್ಲಿ ಈ ಜ್ವರ ತಗಲಿದೆಯೆಂಬ ಶಂಕೆಯೂ ಉಂಟಾ ಗಿದೆ.  ಮಳೆಗಾಲದಲ್ಲಿ ಇಲಿಜ್ವರ ಅತೀ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇಲಿಜ್ವರ ವರದಿಯಾಗುತ್ತಿದೆ. ಜುಲೈ, ಅಗೋಸ್ತ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಇಲಿಜ್ವರ ಹೆಚ್ಚಾಗಿ ಪಸರಿಸುತ್ತದೆ.

ಸರಿಯಾದ ಚಿಕಿತ್ಸೆ ಮೂಲಕ ಗುಣಪಡಿಸಬಹುದಾದ ಜ್ವರವಾಗಿದೆ ಇದು. ಇದಕ್ಕೆ ಅಗತ್ಯದ ಔಷಧಿಗಳು ಇವೆ. ಇಲಿಗಳಿಂದಲೇ ಇಲಿಜ್ವರ ಹರಡುತ್ತದೆ. ಇಲಿಜ್ವರಕ್ಕೆ ಚಿಕಿತ್ಸೆಗೆ ಅಗತ್ಯದ ಎಲ್ಲಾ ಔಷಧಿಗಳಿದ್ದರೂ ಆ ಜ್ವರಕ್ಕೆ ಜನರು ಬಲಿಯಾಗುತ್ತಿರುವುದು ಕೇರಳಕ್ಕೆ ಸಂಬಂಧಿಸಿ ಈಗ ಒಂದು ದೊಡ್ಡ ಸವಾಲಾಗಿ ತಲೆಯೆತ್ತಿದೆ. ವಿಳಂಬವಾಗಿ ಚಿಕಿತ್ಸೆ ಪಡೆಯುವುದೇ ಸಾವಿಗೆ ಕಾರಣವಾಗುತ್ತಿದೆಯೆಂದು ವೈದ್ಯರುಗಳು ಹೇಳುತ್ತಿದ್ದಾರೆ.

ಎಲ್ಲಾ ಪ್ರಾಯದವರಲ್ಲೂ ಇದು ಕಾಣಿಸಿಕೊಳ್ಳುತ್ತದೆ. ಇಲಿಜ್ವರ ಕಿಡ್ನಿ, ಶ್ವಾಸಕೋಶ, ಕರುಳು, ಹೃದಯದ ಮೇಲೂ ಪರಿಣಾಮ ಬೀರುತ್ತದೆ ಎಂದು ತಜ್ಞ ವೈದ್ಯರುಗಳು ಹೇಳುತ್ತಿ ದ್ದಾರೆ. ಜ್ವರ, ಸ್ನಾಯುನೋವು, ತಲೆ ನೋವು, ಕಣ್ಣು ಕೆಂಪು ಬಣ್ಣಕ್ಕೆ ತಿರುಗುವುದು ದೇಹದಲ್ಲಿ ಕಲೆಗಳು ಮೂಡಿ ಬರುವುದು, ಹಳದಿ ಕಾಮಾ ಲೆ, ಮೂತ್ರ ಮಟ್ಟ ಇಳಿಯುವುದು, ಇಲಿಜ್ವರದ ಲಕ್ಷಣಗಳಾಗಿವೆ. ಇಂತಹ ಲಕ್ಷಣ ಪತ್ತೆಯಾ ದಲ್ಲಿ ಅದಕ್ಕೆ ಆ ಕೂಡಲೇ ಚಿಕಿತ್ಸೆ ಪಡೆ ಯಬೇಕೆಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page