ಈವರ್ಷ ವಾಡಿಕೆಗಿಂತ ಹೆಚ್ಚು ಮಳೆ – ಹವಾಮಾನ ವರದಿ

ಕಾಸರಗೋಡು: ಭಾರತದಲ್ಲಿ ಕಳೆದ ವರ್ಷ ಕಡಿಮೆ ಮಳೆಯಿಂದಾಗಿ ಇದೀಗ ನೀರಿನ ಬರ ಎದುರಾಗಿದೆ. ಬಹುತೇಕ  ಪ್ರದೇಶಗಳಲ್ಲಿ  ಬಿರುಬಿಸಿಲು ಆವಾಂತರ ತಂದೊಡ್ಡಿದೆ. ಈಮಧ್ಯೆ ಶುಭ ಸೂಚ ನೆಯಂತೆ ಈ ವರ್ಷ  ಮುಂಗಾರು ಮಳೆಯಲ್ಲಿ ಸಾಮಾನ್ಯ ವಾಡಿಕೆಗಿಂತ ಹೆಚ್ಚು ಮಳೆ ಲಭಿಸಲಿ ದೆಯೆಂದು  ಕೇಂದ್ರಹವಾಮಾನ ಇಲಾಖೆ ಹೇಳಿದೆ.  ಹವಾಮಾನ ಇಲಾಖೆಯ ಈ ಮುನ್ಸೂಚನೆ ಭಾರೀ ಮಹತ್ವ ಪಡೆದುಕೊಂಡಿದೆ.  ೧೯೫೧ರಿಂದ ೨೦೨೩ರ ವರೆಗೆ  ಮಳೆಯ ಇತಿಹಾಸ ನೋಡಿದರೆ ಎಲ್‌ನಿನೋ ಮಾರುತದ ಬೆನ್ನಲ್ಲೇ ಎಲ್‌ನಿನೋ ಅಪ್ಪಳಿಸುವ ಸಂದರ್ಭದಲ್ಲಿ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ಮಳೆಯಾಗಿದೆ. ಈಬಾರಿ ಇದೇ ಸರದಿಯಲ್ಲಿ  ಜೂನ್‌ನಿಂದ ಸೆಪ್ಟಂಬರ್ ತನಕ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಲಭಿಸಲಿದೆಯೆಂದು ತಿಳಿಸಲಾಗಿದೆ.

You cannot copy contents of this page