ಉಚಿತ ವಿದ್ಯುತ್ ಬಿಲ್ ಪಾವತಿಸದ ಪುತ್ತಿಗೆ ಕೃಷಿಭವನಕ್ಕೆ ಕೃಷಿಕರ ಮಾರ್ಚ್ 9ರಂದು
ಸೀತಾಂಗೋಳಿ: ಪುತ್ತಿಗೆ ಕೃಷಿ ಭವನದ ವ್ಯಾಪ್ತಿಯಲ್ಲಿರುವ 200ಕ್ಕೂ ಅಧಿಕ ಕೃಷಿಕರ ನೀರಾವರಿ ಮೋಟಾರು ಉಚಿತ ವಿದ್ಯುತ್ ಬಿಲ್ ಕೃಷಿ ಭವನ ಪಾವತಿಸದ ಹಿನ್ನೆಲೆಯಲ್ಲಿ ಬಾಕಿಯಾದ ಹಲವು ಕೃಷಿಕರಿಗೆ 3೦,೦೦೦ರಿಂದ 7೦,೦೦೦ರೂ.ವರೆಗೆ ಬಿಲ್ ಪಾವತಿಸಲು ವಿದ್ಯುತ್ ಇಲಾಖೆ ನೋಟೀಸು ನೀಡಿದ್ದು, ಪಾವತಿಸದಿದ್ದರೆ ಸಂಪರ್ಕ ಕಡಿತ ಬೆದರಿಕೆ ಹಾಗೂ ಬಿಲ್ ಪಾವತಿಸಲು ಒತ್ತಡ ಹೇರುತ್ತಿರುವುದಾಗಿ ಕಿಸಾನ್ ಸೇನೆ ಪಂಚಾಯತ್ ಸಮಿತಿ ಆರೋಪಿಸಿದೆ. ಬೃಹತ್ ಮೊತ್ತವಾದ ಕಾರಣ ಪಾವತಿಸಲು ಸಾಧ್ಯವಾಗದೆ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಕಂಗು ಕೃಷಿಕರು ಕಂಗಿಗೆ ತಗಲಿದ ಅಜ್ಞಾತ ರೋಗದಿಂದಾಗಿ 80 ಶೇಕಡಾ ಬೆಳೆ ನಷ್ಟಗೊಂಡಿರುವಾಗ ಈ ರೀತಿ ಕೃಷಿಕರನ್ನು ಸಂಕಷ್ಟಕ್ಕೆ ದೂಡುತ್ತಿರುವುದನ್ನು ಅಧಿಕಾರಿಗಳು ಕೊನೆಗೊಳಿಸಬೇಕೆಂದು ಕೃಷಿಕರು ಆಗ್ರಹಿಸಿ ದ್ದಾರೆ. ಕೃಷಿಕರ ಬಾಕಿ ಉಳಿಸಿಕೊಂಡ ಸಂಪೂರ್ಣ ವಿದ್ಯುತ್ ಮೊತ್ತವನ್ನು ಕೃಷಿಭವನ ಪಾವತಿಸಬೇಕೆಂದು, ಬೆಳೆ ನಷ್ಟಗೊಂಡ ಕೃಷಿಕರಿಗೆ ಪರಿಹಾರ ನೀಡಬೇ ಕೆಂದು ಸಮಾವೇಶದಲ್ಲಿ ಆಗ್ರಹಿಸಲಾ ಯಿತು. ಕೃಷಿಕರ ವಿರುದ್ಧ ತೋರುತ್ತಿರುವ ಅನಾಸ್ಥೆಯನ್ನು ಪ್ರತಿಭಟಿಸಿ ಕೃಷಿಕರು ಒಟ್ಟಾಗಿ ಪುತ್ತಿಗೆ ಕೃಷಿಭವನಕ್ಕೆ ಪ್ರತಿಭಟನಾ ಮಾರ್ಚ್ ಈ ತಿಂಗಳ 9ರಂದು ನಡೆಸಲು ತೀರ್ಮಾನಿಸಲಾ ಯಿತು. ಈ ಬಗ್ಗೆ ನಡೆದ ಸಮಾವೇಶವನ್ನು ಕಿಸಾನ್ ಸೇನೆ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಶುಕೂರ್ ಕಾಣಾಜೆ ಉದ್ಘಾಟಿಸಿ ದರು. ಬಾಲಸುಬ್ರಹ್ಮಣ್ಯ ಭಟ್ ಚಕ್ಕಣಿಕೆ ಅಧ್ಯಕ್ಷತೆ ವಹಿಸಿದರು. ಮುಹಮ್ಮದ್ ಹಾಜಿ, ಪ್ರಸಾದ್ ಕಕ್ಕೆಪ್ಪಾಡಿ, ಡಾ. ರಾಜಶೇಖರ್, ಗಣಪತಿ ಭಟ್, ಎಂ. ಇಸ್ಮಾಯಿಲ್ ಹಾಜಿ, ಸುರೇಶ್ ರೈ, ಶ್ಯಾಮ್ ಭಟ್, ಅಬ್ದುಲ್ಲ ಕಂಡತ್ತಿಲ್, ನಾರಾಯಣ ಭಟ್, ಅಲಿ ಮಾತನಾಡಿ ದರು. ಸುರೇಶ್ ಸ್ವಾಗತಿಸಿ, ಸುಬ್ಬಣ್ಣ ರೈ ವಂದಿಸಿದರು.