ಉತ್ತಮ ಠಾಣೆ ಬೇಕಲ್: ಉತ್ತಮ ಅಧಿಕಾರಿ ಡಿವೈಎಸ್‌ಪಿ ಸುನಿಲ್ ಕುಮಾರ್

ಕಾಸರಗೋಡು: ಕಾಸರಗೋಡು ಜಿಲ್ಲೆಯ ಆಗಸ್ಟ್ – ಸೆಪ್ಟೆಂಬರ್ ತಿಂಗಳ ಉತ್ತಮ ಪೊಲೀಸ್ ಠಾಣೆಯಾಗಿ ಬೇಕಲ ಠಾಣೆಯನ್ನು ಆಯ್ಕೆ ಮಾಡಲಾಗಿದೆ. ಬೇಕಲ ಠಾಣೆ ವ್ಯಾಪ್ತಿ ಯಲ್ಲಿ ಆರರಷ್ಟು ಸರ ಕಳವು ಪ್ರಕರಣಗಳಲ್ಲಿ ಆರೋಪಿಗಳಾದ ಇಬ್ಬರನ್ನು ಸಾಹಸಿಕ ರೀತಿಯಲ್ಲಿ ಸೆರೆ ಹಿಡಿಯಲು ಸಾಧ್ಯವಾಗಿರುವುದು ಬೇಕಲ ಠಾಣೆಯನ್ನು ಉತ್ತಮ ಠಾಣೆಯಾಗಿ ಆಯ್ಕೆ ಮಾಡಲು ಸಹಕಾರಿಯಾಗಿದೆ. ಈ ಆರೋಪಿಗಳ ಪತ್ತೆಗಾಗಿ ನೇತೃತ್ವ ವಹಿಸಿದ ಬೇಕಲ ಡಿವೈಎಸ್‌ಪಿ ಸುನಿಲ್ ಕುಮಾರ್ ಉತ್ತಮ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಔಟ್ ಸ್ಟಾಂಡಿಂಗ್ ಪರ್ಫೋರ್ಮರ್ ಆಗಿ ಕಾಸರಗೋಡು ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಗುರುರಾಜರನ್ನು ಆಯ್ಕೆ ಮಾಡಲಾಗಿದೆ. ತಲೆಮರೆಸಿಕೊಂಡಿದ್ದ ೫೦ಕ್ಕೂ ಅಧಿಕ ವಾರಂಟ್ ಆರೋಪಿಗಳನ್ನು ಸೆರೆ ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಾಗಿರುವುದರಿಂದ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಎಸ್.ಪಿ ತಿಳಿಸಿದ್ದಾರೆ. ಜಿಲ್ಲಾ ಎಸ್‌ಪಿ ಡಾ. ವೈಭವ್ ಸಕ್ಸೇನಾ, ಅಡಿಶನಲ್ ಎಸ್.ಪಿ. ವಿ. ಶ್ಯಾಂ ಕುಮಾರ್, ಜಿಲ್ಲೆಯ ಡಿವೈಎಸ್‌ಪಿಗಳು ಸೇರಿದ ಪ್ಯಾನಲ್ ಆಗಿದೆ ಇವರನ್ನು ಆಯ್ಕೆ ಮಾಡಿರುವುದು.

You cannot copy contents of this page