ಉತ್ತರ ಭಾರತದಲ್ಲಿ ಮತ್ತೆ ಭಾರೀ ಭೂಕಂಪ: ಮುಂಜಾನೆ ಅಸ್ಸಾಂನಿಂದ ದೆಹಲಿ ವರೆಗೆ ನಡುಗಿದ ಭೂಮಿ

ನವದೆಹಲಿ: ಅಸ್ಸಾಂನ ಮೋರಿಗಾಂ ವ್‌ನಲ್ಲಿ  ಇಂದು ಮುಂಜಾನೆ ೨.೨೫ಕ್ಕೆ ೫.೦ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ ಬಿಂದು ಮೋರಿ ಗಾಂವ್ ಆಗಿದೆಯೆಂದು ಗುರುತಿಸಲಾ ಗಿದೆ ಯೆಂದು  ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.  ಅಸ್ಸಾಂನ ಹೊರತಾಗಿ ಮೇಘಾಲಯ, ಬಿಹಾರ ಮತ್ತು ದೆಹಲಿ ಎನ್‌ಸಿಆರ್ ವರೆಗೆ ಕಂಪನದ ಅನುಭವವಾಗಿದೆ.

ಮಧ್ಯರಾತ್ರಿ ನಂತರ ಸಂಭವಿಸಿದ  ಈ ಭೂಕಂಪಗಳೊಂದಿಗೆ   ನಿದ್ರೆಯ ಲ್ಲಿದ್ದ ಜನರು ದಿಢೀರ್ ಆಗಿ ಎಚ್ಚೆತ್ತು ಹೆದರಿ ಮನೆಯಿಂದ ಹೊರಗೆ ಓಡಿದ್ದಾರೆ. ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಭೂಕಂಪದ ಅನುಭವ ಉಂಟಾಗಿದೆ. ಗುವಾಹಟಿ, ನಾಗಾಂವ್ ಮತ್ತು ತೇಜ್‌ಪುರದಲ್ಲೂ ಭೂಮಿ ಕಂಪಿಸಿದೆ. ಕಂಪನ ಎಷ್ಟು ಪ್ರಬಲವಾ ಗಿತ್ತೆಂದು ನಮಗೆ ಎಚ್ಚರವಾದಾಗ ಮನೆಯ ಫ್ಯಾನ್‌ಗಳು ಮತ್ತು ಕಿಟಿಕಿಗಳು ಅಲುಗಾಡಲು ಪ್ರಾರಂಭಿಸಿವೆ ಎಂದು ಈ ಪ್ರದೇಶದ ಜನರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ದೆಹಲಿಯ ಎನ್‌ಸಿ ಆರ್‌ನಲ್ಲೂ ಲಘು ಭೂಕಂಪನದ ಅನುಭವ ವಾಗಿದೆ. ನೋಯ್ಡಾ, ಗುರುಗ್ರಾಮ ಮತ್ತು ಫರಿದಾಬಾದ್‌ನಲ್ಲೂ ಇದರ ಅನುಭವ ಉಂಟಾಗಿದೆ.  ಆದರೆ ಕಂಪನಗಳು   ಸೌಮ್ಯವಾಗಿದ್ದವು ಎಂದು ಜನರು ಹೇಳಿದ್ದಾರೆ.

You cannot copy contents of this page