ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವಗಳ ವರ್ಷಾವಧಿ ಉತ್ಸವ ಸಮಾಪ್ತಿ

ಮಂಜೇಶ್ವರ: ಕಳೆದ ನಾಲ್ಕು ದಿನಗಳ ಕಾಲ ನಡೆದ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಉತ್ಸವ ಕಡೆ ಬಂಡಿ ಉತ್ಸವದೊಂದಿಗೆ ಸಮಾಪ್ತಿಗೊಂ ಡಿತು. ಕೊಟ್ಯದಾಯನ ಅಣ್ಣ ದೈವದ ನೇಮ, ಕೆರೆ ದೀಪಾರಾಧನೆ, ತಮ್ಮ ದೈವದ ನೇಮ, ಮಡಸ್ಥಾನ, ಮುಂಡತ್ತಾಯ ದೈವದ ನೇಮ, ನಡುಬಂಡಿ ಉತ್ಸವ, ಅಣ್ಣ ದೈವದ ನೇಮ, ತಮ್ಮ ದೈವದ ನೇಮ, ಮುಂಡತ್ತಾಯ ದೈವದ ನೇಮ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಿತು.  ಉತ್ಸವದ ಕೊನೆಯ ದಿನದಂದು ಮಂಜೇಶ್ವರ ಕ್ಷೇತ್ರದ  ಆಹ್ವಾನ ಮೇರೆಗೆ ಸಾವಿರ ಜಮಾಅತ್ ಮಸೀದಿಯ ಪ್ರತಿನಿಧಿಗಳು ತೆರಳಿ ಭಾವೈಕ್ಯತೆಯ ಸಂದೇಶ ನೀಡಿದರು. ಕೊನೆಯಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು. ನಾಳೆ ರಾತ್ರಿ ಧ್ವಜಾವರೋಹಣ ನಡೆಯಲಿದೆ.

You cannot copy contents of this page