ಕಾಸರಗೋಡು: ವೆಳ್ಳರಿಕುಂಡ್ ಕಳ್ಳಾರಿನ ಒಟಕಂಡಂನಲ್ಲಿನ ಹಿತ್ತಿಲೊಂ ದರಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಬಚ್ಚಿಡ ಲಾಗಿದ್ದ ೭೦ ಲೀಟರ್ ಹುಳಿರಸವನ್ನು ಹೊಸದುರ್ಗ ಅಬಕಾರಿ ರೇಂಜ್ ಕಚೇರಿಯ ಅಸ್ಸಿಸ್ಟೆಂಟ್ ಎಕ್ಸೈಸ್ ಇನ್ ಸ್ಪೆಕ್ಟರ್ (ಗ್ರೇಡ್) ಎಂ. ರಾಜೀವನ್‌ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಅದನ್ನು ಬಳಿಕ ಅಲ್ಲೇ ನಾಶಗೊಳಿಸಲಾಗಿದೆ. ಕಳ್ಳಭಟ್ಟಿ ಸಾರಾಯಿ ತಯಾರಿಸಲೆಂದು ಈ ಮಾಲನ್ನು ಅಲ್ಲಿ ಯಾರೋ ಬಚ್ಚಿಟ್ಟಿದ್ದರೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
