ಉಪ್ಪಳ ಕನಿಲ ಸಸಿಹಿತ್ಲು ದೈವಸ್ಥಾನದಲ್ಲಿ ದೈವದ ಪ್ರತಿಷ್ಠಾಪನೆ, ವರ್ಷಾವಧಿ ಪರ್ವ ನಾಳೆಯಿಂದ

ಉಪ್ಪಳ: ನೆಲ್ಲಿಕತೀಯಾ ತರವಾಡು ಶ್ರೀ ವಿಷ್ಣುಮೂರ್ತಿ, ವಯನಾಟ್ ಕುಲವನ್, ಪಡಿಂಞÁರ್ ಚಾಮುಂಡಿ, ರಕ್ತೇಶ್ವರಿ ದೈವಗಳ ದೈವಸ್ಥಾನ ಕನಿಲ ಸಸಿಹಿತ್ಲು ಇಲ್ಲಿ ಪಡಿಂಞÁರ್ ಚಾಮುಂಡಿ ದೈವದ ಪ್ರತಿಷ್ಠಾಪನೆ, ಕೊರತಿ ಅಮ್ಮನವರ ಪುನರ್ ಪ್ರತಿಷ್ಠೆ, ವರ್ಷಾವಧಿü ಪರ್ವ ಹಾಗೂ ನಾಗತಂಬಿಲ ನಾಳೆ, 13ರಂದು ನಡೆಯಲಿದೆ. ನಾಳೆ ಬೆಳಿಗ್ಗೆ 6ಕ್ಕೆ ಗಣಹೋಮ, ಬೆಳಿಗ್ಗೆ 8.25ರಿಂದ ಧರ್ಮದೈವ ಪಡಿಂಞರ್ ಚಾಮುಂಡಿ ದೈವದ ಪ್ರತಿಷ್ಠಾಪನೆ, ಪುನರ್ ಪ್ರತಿಷ್ಠೆ, 10ರಿಂದ ವೆಂಕಟರಮಣ ದೇವರ ಮುಡಿಪು ಶುದ್ದಿ, 11ರಿಂದ ಸಭೆ, ಮಧ್ಯಾಹ್ನ 12.30ಕ್ಕೆ ನಾಗತಂಬಿಲ, ಅನ್ನಸಂತರ್ಪಣೆ, ಸಂಜೆ 6.30ಕ್ಕೆ ವರ್ಷಾವಧಿ ಪರ್ವ ಪ್ರಾರಂಭ, ರಾತ್ರಿ 10ಕ್ಕೆ ಅನ್ನಸಂತರ್ಪಣೆ, 11.30ಕ್ಕೆ ಕೊರತಿ ಅಮ್ಮನ ಕೋಲ, ಶ್ರೀ ರಕ್ತೇಶ್ವರಿ ದೈವದ ಕೋಲ, ಮರುದಿನ ಮುಂಜಾನೆ 4ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ, 4.30ಕ್ಕೆ ಶ್ರೀ ಪಡಿಂಞÁರ್ ಚಾಮುಂಡಿ ದೈವದ ಕೋಲ, ಸಂಜೆ 3ಕ್ಕೆ ಗುಳಿಗ ದೈವದ ಕೋಲ, 6ಕ್ಕೆ ಮರುಪುತ್ತರಿ ನಡೆಯಲಿದೆ.

You cannot copy contents of this page