ಉಪ್ಪಳದಲ್ಲಿ ಕಾವಲುಗಾರನ ಕೊಲೆ: ಇರಿಯಲು ಆರೋಪಿ ಬಳಸಿದ ಚಾಕು ಪತ್ತೆ; ತನಿಖೆ ಮುಂದುವರಿಕೆ
ಉಪ್ಪಳ: ಉಪ್ಪಳ ಮೀನು ಮಾರುಕಟ್ಟೆ ಬಳಿಯ ಕಟ್ಟಡದ ಕಾವಲುಗಾರನಾದ ಸುರೇಶ್ (48) ಎಂಬವರನ್ನು ಇರಿದು ಕೊಲೆಗೈ ಯ್ಯಲು ಆರೋಪಿ ಬಳಸಿದ ಚಾಕುವನ್ನು ಮೀನು ಮಾರುಕಟ್ಟೆ ಬಳಿಯಿಂದ ಪತ್ತೆಹಚ್ಚಲಾಗಿದೆ. ಪ್ರಕರಣದ ಆರೋಪಿಯಾದ ಉಪ್ಪಳ ಪತ್ವಾಡಿಯ ಸವಾದ್ (24)ನನ್ನು ಪೊಲೀಸರು ಮಾಹಿತಿ ಸಂಗ್ರಹಕ್ಕಾಗಿ ಕೊಂಡೊಯ್ದ ವೇಳೆ ಚಾಕುವನ್ನು ಪತ್ತೆಹಚ್ಚಲಾಯಿತು.
ಮಂಜೇಶ್ವರ ಪೊಲೀಸ್ ಇನ್ ಸ್ಪೆಕ್ಟರ್ ಇ. ಅನೂಪ್ ಕುಮಾರ್, ಎಎಸ್‌ಐ ಮಧುಸೂದ ನನ್ ನೇತೃತ್ವದ ಪೊಲೀಸರು ಆರೋಪಿಯನ್ನು ಕೊಲೆ ನಡೆದ ಸ್ಥಳಕ್ಕೆ ತಲುಪಿಸಿ ಮಾಹಿತಿ ಸಂಗ್ರಹಿಸಿದರು. ಸೆರೆಗೀಡಾಗಿದ್ದ ಆರೋಪಿ ಯನ್ನು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ಐದು ದಿನಗಳ ಕಾಲಕ್ಕೆ ಪೊಲೀಸ್ ಕಸ್ಟಡಿಗೆ ನೀಡಿತ್ತು.
ಕೊಲ್ಲಂ ಏಳುಕೋಣ್ ನಿವಾ ಸಿಯೂ 15 ವರ್ಷಗಳಿಂದ ಪಯ್ಯ ನ್ನೂರಿನಲ್ಲಿ ವಾಸಿಸುತ್ತಿದ್ದ ಸುರೇಶ್‌ರನ್ನು ಕಳೆದ ಮಂಗಳವಾರ ರಾತ್ರಿ 10 ಗಂಟೆ ವೇಳೆ ಇರಿದುಕೊಲೆಗೈದ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾದ ಸವಾದ್‌ನನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ದಲ್ಲಿ ತನಿಖೆ ಮುಂದುವರಿಯುತ್ತಿದೆ.
ಊರಲ್ಲಿದ್ದು ಏನೂ ಪ್ರಯೋಜನವಿಲ್ಲ. ಜೈಲಿನಲ್ಲಿ ಉತ್ತಮ ಆಹಾರ ಸಿಗುತ್ತಿದ್ದು, ಸುಖಜೀವನ ಸಾಗಿಸಲಾಗುತ್ತಿದೆ. ಏನಾದರೂ ಸಮಸ್ಯೆ ಸೃಷ್ಟಿಸಿ ತಾನು ಜೈಲಿಗೆ ಹೋಗುತ್ತೇನೆಂದು ಆರೋಪಿ ಸವಾದ್ ಇತ್ತೀಚೆಗೆ ಕೆಲವರಲ್ಲಿ ತಿಳಿಸಿದ್ದಾನೆಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.