ಉಪ್ಪಳದಲ್ಲಿ ವ್ಯಾಪಾರ ಸಂಸ್ಥೆಯಲ್ಲಿ ಬೆಂಕಿ ಆಕಸ್ಮಿಕ
ಉಪ್ಪಳ: ಇಲ್ಲಿನ ಪತ್ಪಾಡಿ ರಸ್ತೆಯಲ್ಲಿರುವ ಹೈಪರ್ ಮಾರ್ಕೆಟ್ ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಇಂದು ಬೆಳಿಗ್ಗೆ ೮.೩೦ರ ವೇಳೆ ಮಾರ್ಕೆಟ್ನಿಂದ ಹೊಗೆ ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ನಾಗರಿಕರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು. ಕೂಡಲೇ ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದೆ. ಆದರೆ ಅಷ್ಟರೊಳಗೆ ಮಾರ್ಕೆಟ್ನೊಳಗಿದ್ದ ಎ.ಸಿ, ಫ್ರಿಡ್ಜ್ ಸಹಿತ ವಿವಿಧ ಸಾಮ ಗ್ರಿಗಳು ಉರಿದು ನಾಶಗೊಂಡಿವೆ. ಸುಮಾರು ೫ ಲಕ್ಷ ರೂಪಾಯಿಗಳ ನಷ್ಟ ಸಂಭವಿಸಿದೆಯೆಂದು ಮಾಲಕ ಕುಂಜತ್ತೂರಿನ ಮೊಹಮ್ಮದ್ ಬಷೀರ್ ತಿಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗಲಿದೆ ಯೆಂದು ಅಂದಾಜಿಸಲಾಗಿದೆ.