ಉಬ್ರಂಗಳ ವಾರ್ಷಿಕ ಪಾಟು ಉತ್ಸವ ಡಿಸೆಂಬರ್ ೧೬ರಿಂದ

ಬದಿಯಡ್ಕ: ಉಬ್ರಂಗಳ ಬಡಗುಶಬರಿಮಲೆ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ವಾರ್ಷಿಕ ಪಾಟು ಉತ್ಸವ, ಶ್ರೀಭೂತ ಬಲಿ ಉತ್ಸವ ಹಾಗೂ ಧೂಮಾವತಿ ದೈವದ ಕೋಲ ಡಿ.16ರಿಂದ ಡಿ.20ರ ತನಕ ಜರಗಲಿದೆ.
ಡಿ.16ರಂದು ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ, 7.30ಕ್ಕೆ ಹಾಗೂ ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪಾಟು ಉತ್ಸವ, ಸಂಜೆ 6 ಗಂಟೆಗೆ ದೀಪಾರಾಧನೆ, ಸಂಜೆ 6.30ಕ್ಕೆ ಕಾಟ್ನೂಜಿ ಶ್ರೀ ಶಾಸ್ತಾರ ಮೂಲಸ್ಥಾನದಿಂದ ಹುಲ್ಪೆ ಹೊರಡುವುದು, ಸಂಜೆ 6.30ರಿಂದ 7.30 ಭಜನೆ ಶ್ರೀನಿಕೇತನ ಭಜನಾ ತಂಡ ಬಂಟ್ವಾಳ ಶ್ರೀ ಧರ್ಮಶಾಸ್ತಾ ಸೇವಾ ಸಂಘ ಉಬ್ರಂಗಳ ಇವರ ವತಿಯಿಂದ ಭಜನೆ, ರಾತ್ರಿ 7.30ಕ್ಕೆ ಮಹಾಪೂಜೆ, ಪಾಟು ಉತ್ಸವ, ಡಿ.17ರಂದು ಬೆಳಗ್ಗೆ ಮಧ್ಯಾಹ್ನ ರಾತ್ರಿ ಮಹಾಪೂಜೆ, ಪಾಟು ಉತ್ಸವ, ಬೆಳಗ್ಗೆ 8 ಗಂಟೆಯಿAದ ಗೋಪಾಲಕೃಷ್ಣ ಭಜನಾ ಸಂಘ ಅಗಲ್ಪಾಡಿ, ಶ್ರೀ ದುರ್ಗಾ ಭಜನಾ ಸಂಘ ಅಗಲ್ಪಾಡಿ ಇವರಿಂದ ಭಜನೆ, ಪಾಂಚಜನ್ಯ ಕುಣಿತ ಭಜನಾ ತಂಡದಿAದ ಕುಣಿತ ಭಜನೆ, ಸಂಜೆ 6 ಗಂಟೆಗೆ ದೀಪಾರಾಧನೆ, 6.30ಕ್ಕೆ ಮಾತೃಸಮಿತಿಯ ಸದಸ್ಯರಿಂದ ತಿರುವಾದಿರ ಹಾಗೂ ಕೈಕೊಟ್ಟುಕಳಿ ಜರಗಲಿದೆ. 18 ರಂದು ಬೆಳಗ್ಗೆ 7.30ಕ್ಕೆ, ಮಧ್ಯಾಹ್ನ ಹಾಗೂ ರಾತ್ರಿ ಮಹಾಪೂಜೆ, ಪಾಟು ಉತ್ಸವ, ಬೆಳಗ್ಗೆ 8 ಗಂಟೆಯಿAದ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘ ಮಾವಿನಕಟ್ಟೆ ಇವರಿಂದ ಭಜನೆ, ಸಂಜೆ 6.30ಕ್ಕೆ ವಿದ್ವಾನ್ ಯೋಗೀಶ ಶರ್ಮ ಮತ್ತು ಬಳಗದವರಿಂದ ಭಕ್ತಿಗಾನಸುಧಾ, ರಾತ್ರಿ 8.30ಕ್ಕೆ ವಿದುಷಿ ರಾಕಾ ಶೆಟ್ಟಿ ಮಂಗಳೂರು ಇವರ ಶಿಷ್ಯೆ ಅದಿತಿ ಲಕ್ಷಿö್ಮÃ ಭಟ್ ಇವರಿಂದ ಭರತನಾಟ್ಯ. 19 ರಂದು ಬೆಳಗ್ಗೆ 7.30ಕ್ಕೆ ಮಹಾಪೂಜೆ, 9 ಗಂಟೆಗೆ ಕಳೋತ್ಲರಿ ಪೂಜೆ, ಶ್ರೀ ಶಾಸ್ತಾರ ದೇವರ ಪಾಟು ಮಂಗಳೋತ್ಸವ, 10 ಗಂಟೆಗೆ ನವಕಾಭಿಷೇಕ, 11 ಗಂಟೆಗೆ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಬಲಿವಾಡುಕೂಟ, ಸಂಜೆ 5.50ಕ್ಕೆ ತಾಯಂಬಕ, 6 ಗಂಟೆಗೆ ನಾಟ್ಯಗುರು ಮಂಜೇಶ್ವರ ಬಾಲಕೃಷ್ಣ ಮಾಸ್ತರ್ ಇವರ ಶಿಷ್ಯರಿಂದ ನೃತ್ಯ ವೈವಿಧ್ಯ, ರಾತ್ರಿ ಮಹಾಪೂಜೆ, ಶ್ರೀಭೂತಬಲಿ ಉತ್ಸವ, ಕಟ್ಟೆಪೂಜೆ, ಬೆಡಿ ಉತ್ಸವ, 20ರಂದು ಬೆಳಗ್ಗೆ 5.30ಕ್ಕೆ ನಡೆ ತೆರೆಯುವುದು, 6.30ಕ್ಕೆ ದರ್ಶನಬಲಿ, ಬಟ್ಟಲು ಕಾಣಿಕೆ, 8.30ಕ್ಕೆ ಮಹಾಪೂಜೆ, ಮಂತ್ರಾಕ್ಷತೆ, ಸಂಜೆ 6.30ಕ್ಕೆ ದೀಪಾರಾಧನೆ, ರಾತ್ರಿ 7.30ಕ್ಕೆ ಮಹಾಪೂಜೆ, 8 ಗಂಟೆಗೆ ಅನ್ನಸಂತರ್ಪಣೆ, 9 ಗಂಟೆಗೆ ಶ್ರೀ ಕ್ಷೇತ್ರದ ಧೂಮಾವತಿ ದೈವದ ಕೋಲ, ವಾದ್ಯಘೋಷಗಳೊಂದಿಗೆ ಶ್ರೀ ಕ್ಷೇತ್ರಕ್ಕೆ ದೈವದ ಭೇಟಿ, ಬಳಿಕ ಶ್ರೀಗುಳಿಗನ ಕೋಲ ನಡೆಯಲಿದೆ.

You cannot copy contents of this page