ಉಯ್ಯಾಲೆಯಾಡುತ್ತಿದ್ದಾಗ ಕಾಂಕ್ರೀಟ್ ಕಂಬ ಮೈಮೇಲೆ ಬಿದ್ದು ಬಾಲಕ ಮೃತ್ಯು

ತಿರುವನಂತಪುರ: ಉಯ್ಯಾ ಲೆಯಲ್ಲಿ ಆಟವಾಡುತ್ತಿದ್ದಾಗ ಕಾಂಕ್ರೀಟ್ ಕಂಬ ತುಂಡಾಗಿ ಮೈಮೇಲೆ ಬಿದ್ದು ನಾಲ್ಕು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ನೆಯ್ಯಾಟಿಂಗರ ಕಾರಕ್ಕೋಣಂ ತ್ರೇಸ್ಯಪುರಂ ನಿವಾಸಿ ರಾಜೇಶ್ ಎಂಬವರ ಪುತ್ರ ರಿಚ್ಚು ಯಾನೆ ರಿತಿಕ್‌ರಾಜ್ (4) ಮೃತಪಟ್ಟ ದುರ್ದೈವಿ.  ಬಾಲಕ ಸಮೀಪದ ಸಂಬಂಧಿಕರ ಮನೆಯಲ್ಲಿ ನಿನ್ನೆ ಮಧ್ಯಾಹ್ನ ಕಾಂಕ್ರೀಟ್ ಕಂಬಕ್ಕೆ ಸೀರೆ ಕಟ್ಟಿ  ಆಟವಾಡುತ್ತಿದ್ದನು. ಈ ಪೈಕಿ ಒಂದು ಕಂಬ ತುಂಡಾಗಿ ಬಾಲ ಕನ ಮೇಲೆ ಬಿದ್ದಿದೆ. ಸಮೀಪದಲ್ಲಿದ್ದ ಮತ್ತಿಬ್ಬರು ಮಕ್ಕಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ತಲೆಗೆ ಗಂಭೀರ ಗಾಯಗೊಂಡ ಬಾಲಕನನ್ನು  ಕಾರಕ್ಕೋಣಂ ಮೆಡಿಕಲ್ ಕಾಲೇಜಿಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ.

RELATED NEWS

You cannot copy contents of this page