ಉಳುವಾರ್ ಮಖಾಂ ಉರೂಸ್ ಸಮಾಪ್ತಿ

ಕುಂಬಳೆ: ಉಳುವಾರ್ ಜುಮಾ ಮಸೀದಿಯಲ್ಲಿ ಜರಗಿದ ಉರೂಸ್ ಸಮಾಪ್ತಿಗೊಂಡಿತು. ಮೌಲೀದ್ ಮಜ್ಲೀಸ್ ಸಾಮೂಹಿಕ ಪ್ರಾರ್ಥನೆಗೆ ಅಲಿ ತಂಙಳ್ ಕುಂಬೋಳ್ ನೇತೃತ್ವ ನೀಡಿದರು. ಕುಂಬೋಳ್ ಜಹ್‌ಫರ್ ಸ್ವಾದಿಖ್ ತಂಙಳ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಖತೀಬ್ ಅಬ್ದುಲ್ ರಶೀದ್ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಿದರು. ಶಾಸಕ ಎಕೆಎಂ ಅಶ್ರಫ್ ಮುಖ್ಯ ಅತಿಥಿ ಯಾಗಿ ಭಾಗವಹಿಸಿದರು. ಸುಹೈಲ್ ಅಸ್ಸಾಖಾಫ್ ಮಡಕ್ಕರ ಸಮಾ ರೋಪ ಪ್ರಾರ್ಥನೆಗೆ ನೇತೃತ್ವ ನೀಡಿದರು. ಇಬ್ರಾಹಿಂ ಮದನಿ ಜಾಲ್ಸೂರು, ಮಹಮ್ಮೂದ್ ಸಅದಿ, ಅಬ್ದುಲ್ ರಜಾಕ್ ಫೈಸಿ, ಅಬ್ದುಲ್ ಮಜೀದ್ ಅಮಾನಿ ಸಹಿತ ಹಲವು ಗಣ್ಯರು ಭಾಗವಹಿಸಿದರು. ಮುಹಮ್ಮದ್ ಕುಂಞಿ ಉಳುವಾರು ಸ್ವಾಗತಿಸಿದರು.

You cannot copy contents of this page