ಎ.ಕೆ.ಜಿ ಸೆಂಟರ್‌ಗೆ ಆಕ್ರಮಣ:ಮುಖ್ಯ ಸೂತ್ರಧಾರನ ಬಂಧನ
ತಿರುವನಂತಪುರ: ಸಿಪಿಎಂ ರಾಜ್ಯ ಸಮಿತಿ ಕಚೇರಿಯಾದ ಎ.ಕೆ.ಜಿ ಸೆಂಟರ್‌ಗೆ ಆಕ್ರಮಿಸಿದ ಪ್ರಕರಣದಲ್ಲಿ ಮುಖ್ಯ ಸೂತ್ರಧಾರನಾದ ಸುಹೈಲ್ ಶಾಜಹಾನ್ ಎಂಬಾತನನ್ನು ಬಂಧಿಸಲಾಗಿದೆ. ಹೊಸದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಕ್ರೈಂಬ್ರಾಂಚ್ ಈತನನ್ನು ಬಂಧಿಸಿದೆ. ಈತನನ್ನು ಇಂದು ತಿರುವನಂತಪುರಕ್ಕೆ ತಲುಪಿಸಿ ಸಮಗ್ರ ತನಿಖೆ ನಡೆಸಲಾಗುವುದು. ಸೆರೆಗೀಡಾದ ಸುಹೈಲ್ ಶಾಜಹಾನ್ ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್‌ರ ಬೆಂಬಲಿಗನಾಗಿದ್ದಾನೆಂದು ಕ್ರೈಂ ಬ್ರಾಂಚ್ ತಿಳಿಸಿದೆ. ಈತ ಯೂತ್ ಕಾಂಗ್ರೆಸ್ ತಿರುವನಂತಪುರ ಜಿಲ್ಲಾ ಮಾಜಿ ಕಾರ್ಯದರ್ಶಿಯಾಗಿದ್ದಾನೆ. 2022 ಜುಲೈ 1ರಂದು ಎ.ಕೆ.ಜಿ ಸೆಂಟರ್‌ನ ಮೇಲೆ ಸ್ಫೋಟಕ ವಸ್ತು ಎಸೆದಿರುವುದಾಗಿ ಪ್ರಕರಣ ದಾಖಲಿ ಸಲಾಗಿದೆ. ಈ ಪ್ರಕರಣ ನಡೆದು ನಿನ್ನೆಗೆ ಎರಡು ವರ್ಷ ತುಂಬಿತ್ತು.
ಆಕ್ರಮಣದ ಬಳಿಕ ವಿದೇಶಕ್ಕೆ ತೆರಳಿದ ಸುಹೈಲ್ ವಿರುದ್ಧ ಕ್ರೈಂಬ್ರಾಚ್ ಲುಕೌಟ್ ನೋಟೀಸು ಹೊರಡಿಸಿತ್ತು. ಇದೇ ಪ್ರಕರಣದಲ್ಲಿ ಕಳಕೂಟ್ಟಂ ಆಟಿಪ್ರ ಯಯಾ ಯೂತ್ ಕಾಂಗ್ರೆಸ್ ನೇತಾರ ವಿ. ಜಿತಿನ್, ಟಿ. ನವ್ಯ ಎಂಬಿವರನ್ನು ಈ ಹಿಂದೆ ಸೆರೆಹಿಡಿಯಲಾಗಿತ್ತು. ಸ್ಕೂಟರ್‌ನಲ್ಲಿ ಸ್ಫೋಟಕ ವಸ್ತು ಸಹಿತ ತಲುಪಿದ ಸ್ಕೂಟರ್ ಮಾಲಕ ಸುಧೀಶ್ ಎಂಬಾತ ತಲೆಮರೆಸಿಕೊಂ ಡಿದ್ದಾನೆನ್ನಲಾಗಿದೆ.