ಎಂ ಫಾಕ್ಸ್: ರಾಜ್ಯದಲ್ಲಿ ಪತ್ತೆಯಾಗಿದ್ದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ  ಆರೋಗ್ಯ ತುರ್ತು ಪರಿಸ್ಥಿತಿಯ ಹೊಸ ತಳಿ

ತಿರುವನಂತಪುರ: ರಾಜ್ಯದಲ್ಲಿ ಪತ್ತೆಯಾದ ಎಂಫಾಕ್ಸ್ (ಮಂಗನಕಾಯಿಲೆ) ಪ್ರಕರಣ ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ತುರ್ತು ಪರಿಸ್ಥಿತಿಯ ಎಂಫಾಕ್ಸ್‌ನ ಕ್ಲ್ಯಾಡ್-1 ಬಿ ಎಂಬ ಹೊಸ ತಳಿಯಾಗಿದೆಯೆಂದು  ದೆಹಲಿಯಲ್ಲಿ ನಡೆಸಿದ  ಪರೀಕ್ಷೆಯಲ್ಲಿ ಸ್ಪಷ್ಟಗೊಂಡಿದೆ.ಯುಎಇಯಿಂದ  ಹಿಂತಿರುಗಿದ ಮಲಪ್ಪುರಂ ನಿವಾಸಿಯಾಗಿರುವ ೩೮ರ ಹರೆಯದ ಯುವಕನೋರ್ವ ಇತ್ತೀಚೆಗೆ ಸಾವನ್ನಪ್ಪಿದ್ದನು. ಆತನ ಗಂಟಲ ದ್ರವ ಇತ್ಯಾದಿಗಳನ್ನು ಉನ್ನತ ಮಟ್ಟದ ಲ್ಯಾಬ್ ಪರೀಕ್ಷೆಗಾಗಿ ದೆಹಲಿಗೆ ಕಳುಹಿಸಿಕೊಡಲಾಗಿತ್ತು. ಆ ಪರೀಕ್ಷಾ ವರದಿ ಆರೋಗ್ಯ ಇಲಾಖೆಯ ಕೈಗೆಸೇರಿದ್ದು, ಅದರಲ್ಲಿ ಯುವಕನ ಸಾವಿಗೆ ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ಘೋಷಿಸಿದ್ದ ಎಂಫಾಕ್ಸ್‌ನ  ಕ್ಲ್ಯಾಡ್-1-ಬಿ  ಹೊಸ ತಳಿಯಾಗಿದೆಯೆಂದು ಸ್ಪಷ್ಟಪಡಿಸಲಾ ಗಿದೆ. ಇಂತಹ  ಹೊಸ ತಳಿ ಪತ್ತೆಯಾಗಿರುವುದು ಭಾರತದಲ್ಲಿ ಇದೇ ಪ್ರಥಮವಾಗಿದೆ. ಇದು ಅತೀ ಶೀಘ್ರ ರೋಗ ಹರಡಿಸುವ ವೈರಾಣುವಾಗಿದೆ. ಇದನ್ನು 2022ರಂದು ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತು ಪರಿಸ್ಥಿತಿಯ ಹೊಸ ತಳಿಯನ್ನಾಗಿ ಘೋಷಿಸಿತ್ತು.  ಈ ರೋಗಕ್ಕೆ ವಿಶ್ವದಾದ್ಯಂತವಾಗಿ 200 ಮಂದಿ ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಮಂದಿಗೆ ಈ ರೋಗ ತಗಲಿದೆ. ಇದರ ಮೂಲಸ್ಥಾನ ಆಫ್ರಿಕಾ ಖಂಡವಾಗಿದೆಯೆಂದು ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page