ಎಂ.ವಿ. ಬಾಲಕೃಷ್ಣನ್ ಮಾಸ್ತರ್ ಮತ್ತೆ ಸಿಪಿಎಂ ಜಿಲ್ಲಾ ಕಾರ್ಯದರ್ಶಿ

ಕಾಸರಗೋಡು: ಸಿಪಿಎಂ ಜಿಲ್ಲಾ ಕಾರ್ಯದರ್ಶಿಯಾಗಿ ಎಂ.ವಿ. ಬಾಲಕೃಷ್ಣನ್ ಮತ್ತೆ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎಡರಂಗ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಅವರು ತಾತ್ಕಾಲಿಕವಾಗಿ ಆ ಸ್ಥಾನದಿಂದ ದೂರ ಉಳಿದಿದ್ದರು. ಅವರ ಬದಲಿಗೆ ಸಿ.ಎಚ್. ಕುಂಞಂಬುರಿಗೆ ಕಾರ್ಯ ದರ್ಶಿಯ ತಾತ್ಕಾಲಿಕ ಹೊಣೆಗಾರಿಕೆ ವಹಿಸಿಕೊಡಲಾಗಿತ್ತು. ನಿನ್ನೆ ನಡೆದ ಸಿಪಿಎಂ ಜಿಲ್ಲಾ ಸಮಿತಿ ಸಭೆಯ ನಿರ್ಧಾರದಂತೆ ಎಂ.ವಿ. ಬಾಲಕೃಷ್ಣನ್ ಕಾರ್ಯದರ್ಶಿ ಸ್ಥಾನವನ್ನು ವಹಿಸಿಕೊಂಡಿದ್ದಾರೆ. ಸಭೆಯಲ್ಲಿ ಚುನಾವಣೆ ಅವಲೋಕ ನವೂ ನಡೆಯಿತು. ಮತಗಟ್ಟೆಗಳಿಂದ ಲಭಿಸಿದ ಲೆಕ್ಕಾಚಾರಗಳ ಪ್ರಕಾರ ಎಡರಂಗ ಅಭ್ಯರ್ಥಿ ಗೆಲುವು ಸಾಧಿಸ ಲಿದ್ದಾರೆಂದು ಸಭೆ ಅಭಿಪ್ರಾಯಪಟ್ಟಿದೆ.

RELATED NEWS

You cannot copy contents of this page