ಎಂಡಿಎಂಎ, ಕಾರು ವಶ: ನಾಲ್ಕು ಯುವಕರು ಸೆರೆ

ಕಾಸರಗೋಡು: ಎಂಡಿಎಂಎ ಹಾಗೂ ಕಾರು ಸಹಿತ ೪ ಮಂದಿ ಯುವಕರನ್ನು ಪಾಲಕುನ್ನುನಲ್ಲಿ ಸೆರೆ ಹಿಡಿಯಲಾಗಿದೆ. ಕೋಟಿಕುಳಂ ನಿವಾಸಿ ಇಮ್ತಿಶಾನ್ (25), ಚಿತ್ತಾರಿ ಮುಕುಟ್ ನಿವಾಸಿ ಎಂ.ಕೆ. ಹೌಸ್‌ನ ಎಂ.ಕೆ. ಶರಫುದ್ದೀನ್ (27), ಕೋಟಿಕುಳಂ ರೈಲ್ವೇ ನಿಲ್ದಾಣ ಸಮೀಪದ ಎಂ.ಎ. ಮೊಹಮ್ಮದ್ ಆರೀಫ್ (24), ಕಳನಾಡು ಅಬ್ದುಲ್ ಮುನವರ್ (22) ಎಂಬಿವರನ್ನು ಬೇಕಲ ಎಸ್‌ಐ ಎಂ. ಸತೀಶ್ ಹಾಗೂ ತಂಡ ಸೆರೆ ಹಿಡಿದಿದೆ. ನಿನ್ನೆ ರಾತ್ರಿ 7 ಗಂಟೆ ವೇಳೆ ಪಾಲಕುನ್ನು ಪೇಟೆಯಲ್ಲಿ ಕಾಸರಗೋಡು ಭಾಗಕ್ಕೆ ತೆರಳುವ ಪ್ರಯಾಣಿಕರಿಗಾಗಿ ಸ್ಥಾಪಿಸಿದ ಬಸ್ ತಂಗುದಾಣದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಕಾರನ್ನು ತಡೆದು ನಿಲ್ಲಿಸಿ ಪರಿಶೋಧಿಸಿದಾಗ 0.95 ಗ್ರಾಂ ಎಂಡಿಎಂಎ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕಾರು ಹಾಗೂ ಮಾಲನ್ನು ಕಸ್ಟಡಿಗೆ ತೆಗೆಯಲಾಗಿದೆ. ಮಾದಕ ಪದಾರ್ಥ ಸೆರೆ ಹಿಡಿದ ಘಟನೆ ತಿಳಿದು ಹಲವಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದಾರೆ. ಪೊಲೀಸ್ ತಂಡದಲ್ಲಿ ಜ್ಯೂನಿಯರ್ ಎಸ್‌ಐ ಎಂ. ಮನುಕೃಷ್ಣನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಸತೀಶ್, ದಿಲೀಪ್, ಲಿಜಿತ್ ಎಂಬಿವರಿದ್ದರು.

RELATED NEWS

You cannot copy contents of this page