ಎಂಡಿಎಂಎ ಸಹಿತ ಉಪ್ಪಳ ನಿವಾಸಿ ಸೆರೆ

ಬಂದ್ಯೋಡು: ಮಾರಕ ಮಾದಕ ಪದಾರ್ಥವಾದ ಎಂಡಿಎಂಎ ಸಹಿತ ಮಧ್ಯವಯಸ್ಕ ಸೆರೆಯಾಗಿದ್ದಾನೆ. ಉಪ್ಪಳ ಮಣಿಮುಂಡ ಹೌಸ್‌ನ ಮೊಹಮ್ಮದ್ ಹರ್ಷಾದ್ (50)ನನ್ನು ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್‌ರ ನೇತೃತ್ವದ ತಂಡ ಬಂಧಿಸಿದೆ. ಕುಂಬಳೆ ಎಸ್‌ಐ ಕೆ.ಪಿ. ಗಣೇಶ್ ಸಹಕರಿಸಿದರು. ಶನಿವಾರ ಮುಂಜಾನೆ ಬಂದ್ಯೋಡ್‌ನಲ್ಲಿ ಈತನನ್ನು ಬಂಧಿಸಲಾಗಿದೆ. ಕೈಯಲ್ಲಿದ್ದ ೩.೫೩ ಗ್ರಾಂ ಎಂಡಿಎಂಎಯನ್ನು ವಶಪಡಿಸಲಾಗಿದೆ. ಜೀರ್ಣಗೊಂಡ ಕಟ್ಟಡವೊಂದರ ಸಮೀಪದಲ್ಲಿ ಶಂಕಾಸ್ಪದವಾಗಿ ಕಂಡು ಬಂದ ಮೊಹಮ್ಮದ್ ಹರ್ಷಾದ್‌ನನ್ನು ಕಸ್ಟಡಿಗೆ ತೆಗೆದು ತಪಾಸಣೆ ನಡೆಸಿದಾಗ ಮಾದಕ ಪದಾರ್ಥ ಕಂಡು ಬಂದಿದೆ.

RELATED NEWS

You cannot copy contents of this page