ಎಂಡಿಎಂಎ ಸಹಿತ ಓರ್ವ ಸೆರೆ

ಮಂಜೇಶ್ವರ: ಎಂಡಿಎಂಎ ಸಹಿತ ಓರ್ವನನ್ನು ಮಂಜೇಶ್ವರ  ಪೊಲೀಸರು ಸೆರೆಹಿಡಿದಿದ್ದಾರೆ.1.97 ಗ್ರಾಂ ಎಂಡಿಎಂಎ ಸಹಿತ ಉಳ್ಳಾಲದ ಮಾಸ್ತಿಕಟ್ಟೆ ಆಜಾದ್ ನಗರದ ಶೈನಾಜ್ ಕೊಟೇಜ್ ನಿವಾಸಿ ಫಸಲ್ ಹುಸೈನ್ (32)ನನ್ನು ಶನಿವಾರ ರಾತ್ರಿ ತಲಪ್ಪಾಡಿಯಿಂದ ಸೆರೆಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಿಐ ಅನೂಪ್ ಕುಮಾರ್ ನೇತೃತ್ವದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ  ರಸ್ತೆ ಬದಿಯಲ್ಲಿದ್ದ ಈತನನ್ನು ಪರಿಶೀಲಿಸಿದಾಗ ಎಂಡಿಎಂಎ ಪತ್ತೆಯಾಗಿದೆ. ಬಳಿಕ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

You cannot copy contents of this page