ಎಂಡಿಎಂಎ ಸಹಿತ ಕಾರಿನಲ್ಲಿ  ಸಂಚರಿಸುತ್ತಿದ್ದ ಮೂವರ ಸೆರೆ

ಕುಂಬಳೆ: ಭಾರೀ ಮಾದಕವಸ್ತು ವಾದ ಎಂಡಿಎಂಎ ಸಹಿತ ಕಾರಿನಲ್ಲಿ ಸಂಚರಿಸುತ್ತಿದ್ದ ಮೂರು ಮಂದಿಯನ್ನು ಕುಂಬಳೆ ಪೊಲೀಸರು ಸೆರೆ ಹಿಡಿದಿದ್ದಾರೆ. ಕಯ್ಯಾರು ಪರಂಬಳ ಹೌಸ್‌ನ ಮೊಹಮ್ಮದಲಿ (೨೭), ಸೀತಾಂಗೋಳಿ ಮುಖಾರಿ ಕಂಡದ ಉಬೈದ್ (೨೨), ಕಯ್ಯಾರು ಕುಡಾಲುಮೇರ್ಕಳದ ಅಬ್ದುಲ್ ರಹ್ಮಾನ್ (೨೩) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಇವರು ಕಾರಿನಲ್ಲಿ ಸಾಗಿಸುತ್ತಿದ್ದ ೩.೮೭ ಗ್ರಾಂ ಎಂಡಿಎಂಎಯನ್ನು ವಶಪಡಿಸಲಾಗಿದೆ.

ಮೊನ್ನೆರಾತ್ರಿ ಕುಂಬಳೆ ಠಾಣೆ ಅಡಿಶನಲ್ ಎಸ್.ಐ. ಉಮೇಶ್ ನೇತೃತ್ವದ ಪೊಲೀಸ್ ತಂಡ ಮುಖಾರಿ ಕಂಡದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಕಾರು ಆಗಮಿಸಿದೆ. ಕಾರನ್ನು ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ. ಬಂಧಿತ ಆರೋಪಿಗಳಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.

You cannot copy contents of this page