ಎಂಡಿಎಂಎ ಸಾಗಾಟ: ಮಂಜೇಶ್ವರ ನಿವಾಸಿಗಳಾದ ಇಬ್ಬರ ಸೆರೆ

ಮಂಜೇಶ್ವರ: ನಿಷೇಧಿತ ಮಾದಕವಸ್ತು ಎಂಡಿಎಂಎ ಸಾಗಿಸಿ ಮಾರಾಟಕ್ಕೆತ್ನಿಸಿದ ಇಬ್ಬರನ್ನು  ಮಂಗಳೂರು ಸಿಸಿಬಿ ಪೊಲೀಸರು ಸೆರೆಹಿಡಿದಿದ್ದಾರೆ. ಮಂಜೇಶ್ವರ ಬಡಾಜೆ ಪುಚ್ಚೆತ್ತಬೈಲು ನಿವಾಸಿಗಳಾದ ಅಬ್ದುಲ್ ಸಲಾಂ ಅಲಿಯಾಸ್ ಸಲಾಂ (3೦), ಸೂರಜ್ ರೈ ಅಲಿಯಾಸ್ ಅಂಕಿತ್ (26)ನನ್ನು  ಸೆರೆಹಿಡಿಯಲಾಗಿದೆ. ಎಂಡಿಎಂಎ ಸಹಿತ ಮಂಗಳೂರಿಗೆ ಇವರು ಆಗಮಿಸುತ್ತಿದ್ದಾರೆಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀ ಸರು ತಲಪಾಡಿ ಕೆಸಿ ರೋಡ್‌ನಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ೭೫ ಸಾವಿರ ರೂ. ಮೌಲ್ಯದ ೧೫ ಗ್ರಾಂ ನಿಷೇಧಿತ ಮಾದಕವಸ್ತು ಎಂಡಿಎಂಎ, ಎರಡು ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪಕ, ದ್ವಿಚಕ್ರ ವಾಹನವನ್ನು ವಶಪಡಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಆರೋಪಿಗಳ ಪೈಕಿ ಅಬ್ದುಲ್ ಸಲಾಂ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆಗೆ ಸಂಬಂಧಪಟ್ಟಂತೆ  ಹಾಗೂ    ಸೂರಜ್ ರೈ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಇದೇ ಪ್ರಕರಣದಲ್ಲಿ  ಕೇಸು ದಾಖಲಿಸಲಾ ಗಿದೆ. ಆರೋಪಿಗಳು ಮಾದಕವಸ್ತು ವನ್ನು ಮಂಗಳೂರಿನಲ್ಲಿ  ವಿದ್ಯಾರ್ಥಿ ಗಳಿಗೆ ಮಾರಾಟ ಮಾಡಲೆಂದು ಕೊಂಡೊಯ್ಯುತ್ತಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page