ಎಐವೈಎಫ್ ನಾಯಕಿಯ ಸಾವು: ಪತಿಯಿಂದ ಹೇಳಿಕೆ ದಾಖಲು; ಓರ್ವ ಮುಖಂಡನ ಬಗ್ಗೆ ಶಂಕೆ

ಮಣ್ಣಾರ್‌ಕಾಡ್: ಎಐವೈಎಸ್ ನಾಯಕಿಯನ್ನು  ನೇಣುಬಿಗಿದು ಆತ್ಯಗತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚಿದ ಘಟನೆಯಲ್ಲಿ ಈಕೆಯ ಪತಿಯ ಹೇಳಿಕೆಯನ್ನು ಮಣ್ಣಾರ್‌ಕಾಡ್ ಪೊಲೀಸರು ದಾಖಲಿಸಿದ್ದಾರೆ.

ಎಐವೈಎಫ್ ಜಿಲ್ಲಾ ಸಮಿತಿ ಸದಸ್ಯೆಯಾಗಿದ್ದ ಶಾಹಿರ (31) ಮೊನ್ನೆ ವಡಕ್ಕು ಮಣ್ಣದ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾ ಗಿತ್ತು. ಇದಕ್ಕೆ ಸಂಬಂಧಿಸಿ ಪತಿ ಸಾದಿಖ್ ನಿನ್ನೆ ಠಾಣೆಗೆ ತಲುಪಿ ಹೇಳಿಕೆ ನೀಡಿದ್ದಾರೆ. ವಿದೇಶದಲ್ಲಿದ್ದ ಇವರು ನಿನ್ನೆಯಷ್ಟೇ  ತಲುಪಿದ್ದಾರೆ.

ಶಾಹಿನರ ಸಾವಿನಲ್ಲಿ ಸ್ಥಳೀಯನಾದ ಓರ್ವ ಮುಖಂಡ ಶಾಮೀಲಾಗಿದ್ದಾ ನೆಂದು ಪತಿ ಮಾಧ್ಯಮದವರಲ್ಲಿ ತಿಳಿಸಿದ್ದಾರೆ. ಈ ಮುಖಂಡನ ಜೊತೆ ಆರ್ಥಿಕ ವ್ಯವಹಾರ ಇತ್ತೆಂದೂ ಇದು ಕೆಲವೊಮ್ಮೆ ಕುಟುಂಬ ಸಮಸ್ಯೆಗಳಿಗೂ ಕಾರಣವಾಗಿತ್ತೆಂದು ಹೇಳಿದ್ದಾರೆ. ಈ ವಿಷಯವನ್ನು  ಪಕ್ಷದ ಜಿಲ್ಲಾ ಕಾರ್ಯದರ್ಶಿ ಸೇರಿದಂತೆ ಮುಖಂ ಡರಿಗೆ ತಿಳಿಸಿದ್ದೇನೆ. ಸಮಗ್ರ ತನಿಖೆ ನಡೆಸಲು ಪೊಲೀಸರಿಗೆ ದೂರು ನೀಡಿರುವುದಾಗಿಯೂ ಪತಿ ತಿಳಿಸಿ ದ್ದಾರೆ. ಆದರೆ ಇದೇ ವೇಳೆ ಆರೋಪಿಸುವಂತಹ ದೂರುಗಳಂ ದೂ ತನ್ನ ಗಮನಕ್ಕೆ ಯಾರು ತಂದಿಲ್ಲ ವೆಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕೆ.ಪಿ. ಸುರೇಶ್‌ರಾಜ್ ತಿಳಿಸಿದ್ದಾರೆ.

RELATED NEWS

You cannot copy contents of this page