ಎಕೆಪಿಎ ಕುಂಬಳೆ ವಲಯ ಸಮ್ಮೇಳ ನಾಳೆ
ಕುಂಬಳೆ: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿ ಯೇಶನ್ ಕುಂಬಳೆ ವಲಯ ಸಮ್ಮೇಳನ ನಾಳೆ ಮಾಧವ ಪೈ ಸಭಾಂಗಣದಲ್ಲಿ ಜರಗಲಿದೆ. ಬೆಳಿಗ್ಗೆ 9.30ಕ್ಕೆ ಧ್ವಜಾರೋಹಣ, 10 ಗಂಟೆಗೆ ಸಭೆ ನಡೆಯಲಿದ್ದು, ಕುಂಬಳೆ ವಲಯ ಉಪಾಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಅಧ್ಯಕ್ಷತೆ ವಹಿಸುವರು. ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ಉದ್ಘಾಟಿಸುವರು. ರಾಜ್ಯಸಮಿತಿ ಸದಸ್ಯ ಪ್ರಶಾಂತ್ ತೈಕಡಪ್ಪುರ ಮುಖ್ಯ ಅತಿಥಿಯಾಗಿರುವರು. ಜಿಲ್ಲಾ ಅಧ್ಯಕ್ಷ ಕೆ.ಸಿ. ಅಬ್ರಹಾಂ, ಜಿಲ್ಲಾ ಕಾರ್ಯದರ್ಶಿ ಸುಗುಣನ್, ಕೋಶಾಧಿಕಾರಿ ಸುನಿಲ್ ಕುಮಾರ್ ಪಿ.ಟಿ., ಉಪಾಧ್ಯಕ್ಷ ವೇಣು ವಿ.ವಿ., ಶರೀಫ್, ಜೊತೆ ಕಾರ್ಯದರ್ಶಿ ರಾಜೇಂದ್ರನ್, ಪ್ರಜೀತ್, ಸುಧೀರ್, ದಿನೇಶ್, ಅಶೋಕನ್, ಅನೂಪ್, ವಾಸು ಎ., ವಿಜಯನ್, ವೇಣುಗೋಪಾಲ್, ಸುರೇಶ್ ಆಚಾರ್ಯ, ಅಬ್ದುಲ್ ನವಾಸ್, ನವೀನ್ ಕುಮಾರ್, ಶ್ಯಾಂಪ್ರಸಾದ್ ಸರಳಿ, ನಿತ್ಯಪ್ರಸಾದ್, ಪ್ರಮೋದ್ ಕುಂಬಳೆ ಭಾಗವಹಿಸುವರು. ಅಪರಾಹ್ನ ಪ್ರತಿನಿಧಿ ಸಮ್ಮೇಳನ ನಡೆಯಲಿದೆ.