ಎಕೆಪಿಎ ಜಿಲ್ಲಾ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಷನ್ (ಎ.ಕೆ.ಪಿ.ಎ) ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಇರಿಯಾ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಎ.ಕೆ.ಪಿ.ಎ ರಾಜ್ಯ ಉಪಾಧ್ಯಕ್ಷ ಸಜೀಶ್ ಮಣಿ ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿದರು. ಪಿ.ಟಿ.ಎ. ಅಧ್ಯಕ್ಷ ಗಂಗಾಧರನ್ ಪಿ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಸುಗುಣನ್ ಇರಿಯಾ ಮತ್ತು ಜಿಲ್ಲಾ ಅರಣ್ಯಾಧಿಕಾರಿಗಳು ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟರು. ಜಿಲ್ಲಾ ಕಾರ್ಯದರ್ಶಿ ರಾಜೇಂದ್ರನ್ ವಿ.ಎನ್., ಖಜಾಂಚಿ ಪ್ರಜಿತ್ ಎನ್.ಕೆ., ಜಿಲ್ಲಾ ಪಿ.ಆರ್.ಒ. ರಾಜೀವನ್, ರಾಜಪುರಂ ವಲಯಾಧ್ಯಕ್ಷ ಸಿನು ಬಂದಡ್ಕ, ಕಾಂಞAಗಾಡ್ ವಲಯಾಧ್ಯಕ್ಷ ರಮೇಶನ್ ಮಾವುಂಗಲ್ ಮತ್ತು ರಾಜಪುರಂ ಘಟಕದ ಅಧ್ಯಕ್ಷ ಸನ್ನಿ ಮಾಣಿಶೇರಿ ಶುಭಾಶಯ ಕೋರಿದರು. ಮುಖ್ಯೋಪಾಧ್ಯಾಯಿನಿ ಬಿಂದು ಸ್ವಾಗತಿಸಿ, ಶಾಲಾ ಪರಿಸರ ಕ್ಲಬ್ ಸಂಯೋಜಕ ರಾಜೇಶ್ ವಂದಿಸಿದರು.

RELATED NEWS

You cannot copy contents of this page