ಎಚ್‌ಐವಿಗೆ  ರೋಗಪ್ರತಿರೋಧಕ ಔಷಧ ಸಿದ್ಧ

ತಿರುವನಂತಪುರ: ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಎಚ್‌ಐವಿ (ಏಡ್ಸ್)ಗೆ ವಿಜ್ಞಾನಿಗಳು ಕೊನೆಗೂ ಲಸಿಕೆ ಕಂಡುಹಿಡಿದಿದ್ದಾರೆ. ಅಮೇರಿಕದ ಗಿಲಿಯಾಡ್ ಎಂಬ ಫಾರ್ಮಾಸ್ಯೂಟಿಕಲ್ ಕಂಪೆನಿ ಈ ಲಸಿಕೆ ಸಿದ್ಧಪಡಿಸಿದೆ. ವಿಜ್ಞಾನಿಗಳ ಪ್ರಕಾರ  ಲೆನಕಾವಿರ್ ಲಸಿಕೆ ಪುರುಷರಲ್ಲಿಯೂ ಕೂಡಾ ಹೆಚ್‌ಐವಿ ಸೋಂಕನ್ನು ಬಹುತೇಕ ತೊಡೆದುಹಾಕುತ್ತದೆ. ಕ್ಲಿನಿಕ್ ಪ್ರಯೋಗದಲ್ಲಿ 5000 ಜನರನ್ನು  ಈ ಪರೀಕ್ಷೆಗೊಳಪಡಿಸಲಾಗಿದ್ದು, ಈ ಅವಧಿಯಲ್ಲಿ ಲಸಿಕೆ ಪಡೆದುಕೊಂಡ ಯಾವುದೇ ಮಹಿಳೆ ಸೋಂಕಿಗೆ ಬಲಿಯಾಗಲಿಲ್ಲ. ಈ ಲಸಿಕೆಯನ್ನು ಆರು ತಿಂಗಳ ಮಧ್ಯಂತರದಲ್ಲಿ ನೀಡಲಾಗುತ್ತದೆ.  ವರ್ಷಕ್ಕೆ ಎರಡು ಬಾರಿ ಲೆನಕಾವಿರ್ ಎಂಬ ಹೊಸ ರೋಗ ನಿರೋಧಕ ಔಷಧಿಯೊಂದಿಗೆ ಲಸಿಕೆಯನ್ನು ಪಡೆಯುವುದು ಎಚ್‌ಐವಿ ಸೋಂಕನ್ನು ತಡೆಗಟ್ಟುವಲ್ಲಿ ಸಹಾಯಮಾಡುತ್ತದೆ ಎಂದು ಲ್ಯಾಬ್ ಅಧಿಕೃತರು ತಿಳಿಸಿದ್ದಾರೆ.

You cannot copy contents of this page