ಎಡನೀರು ಮಠಾಧೀಶರ ಕಾರಿನ ಮೇಲೆ ದಾಳಿ: ವಿ.ಹಿಂ.ಪದಿಂದ ಇಂದು ಸಂಜೆ ಪ್ರತಿಭಟನೆ
ಎಡನೀರು: ಬೋವಿಕ್ಕಾನ- ಇರಿ ಯಣ್ಣಿ ರಾಜ್ಯ ಹೆದ್ದಾರಿಯಲ್ಲಿ ಎಡನೀರು ಮಠಾಧೀಶರ ಕಾರನ್ನು ತಡೆದು ನಿಲ್ಲಿಸಿ ಹಾನಿ ಉಂಟುಮಾಡಿದ ಘಟನೆಯನ್ನು ಪ್ರತಿಭಟಿಸಿ ವಿಶ್ವ ಹಿಂದೂ ಪರಿಷತ್ತಿನ ನೇತೃತ್ವದಲ್ಲಿ ಇಂದು ಸಂಜೆ ೫ ಗಂಟೆಗೆ ಬೋವಿಕ್ಕಾನದಲ್ಲಿ ಪ್ರತಿಭಟನಾ ಸಭೆ ನಡೆಸಲು ತೀರ್ಮಾನಿಸಲಾಗಿದೆ. ರವಿವಾರ ಅಪರಾಹ್ನ ಇರಿಯಣ್ಣಿ ರಸ್ತೆ ಮೂಲಕ ಸ್ವಾಮೀಜಿಯವರ ಕಾರು ಎಡನೀರು ಮಠದತ್ತ ಬರುತ್ತಿದ್ದ ದಾರಿ ಮಧ್ಯೆ ಯುವಕನೋರ್ವ ಆ ಕಾರನ್ನು ತಡೆದು ನಿಲ್ಲಿಸಿ, ಅದರ ಗಾಜಿಗೆ ಹಾನಿಗೊಳಿ ಸಿದ್ದಾನೆ. ಬೋವಿಕ್ಕಾನ- ಇರಿಯಣ್ಣಿ ರಸ್ತೆಯಲ್ಲಿ ರಾಜ್ಯ ಹೆದ್ದಾರಿ ಸೈಕ್ಲಿಂಗ್ ಸ್ಪರ್ಧೆ ನಡೆಯುತ್ತಿದ್ದ ವೇಳೆ ಆ ರಸ್ತೆಯಲ್ಲಿ ವಾಹ ನಗಳಿಗೆ ನಿಯಂತ್ರಣ ಹೇರಿತ್ತಾದರೂ,
ಸ್ವಾಮೀಜಿಯವರ ಕಾರನ್ನು ಆ ಮೂಲಕ ಸಾಗಲು ಅನು ಮತಿ ನೀಡಲಾಗಿತ್ತು. ಅದರಂತೆ ಕಾರು ಬೋವಿಕ್ಕಾನ ಬಳಿ ತಲುಪಿದಾಗ ಯುವಕನೋರ್ವ ಆ ಕಾರನ್ನು ತಡೆದು ನಿಲ್ಲಿಸಿ ಅದರ ಗಾಜಿಗೆ ಬಡಿದು ಹಾನಿ ಗೊಳಿಸಿದ್ದಾನೆ. ಅದು ಭಾರೀ ಪ್ರತಿಭಟ ನೆಗೂ ದಾರಿ ಮಾಡಿಕೊಟ್ಟಿತ್ತು. ಈ ಮಧ್ಯೆ ಸೈಕ್ಲಿಂಗ್ ಸ್ಪರ್ಧೆ ಏರ್ಪಡಿಸಿದ ಸಂಘದ ಸಂಘಟನೆಯ ಪದಾಧಿಕಾರಿ ಗಳು ಎಡನೀರು ಮಠಕ್ಕೆ ಬಂದು ಸ್ವಾಮೀ ಜಿಯವರಲ್ಲಿ ಕ್ಷಮೆಯಾಚಿಸಿದ್ದಾರೆ.