ಮಧೂರು: ಆರ್ಥಿಕ ಸಂಧಿಗ್ದತೆಯ ಸಮಯದಲ್ಲಿ ಎಡರಂಗ ಸರಕಾರದ ನಾಲ್ಕನೇ ವಾರ್ಷಿಕಾಚರಣೆಗಾಗಿ ಖಜಾನೆಯ ಹಣವನ್ನು ಪೋಲು ಮಾಡುತ್ತಿದೆಯೆಂದು ಆರೋಪಿಸಿ ಇಂದು ನಡೆಯಲಿರುವ ಐಕ್ಯರಂಗದ ಕಪ್ಪು ದಿನಾಚರಣೆ ಯಶಸ್ವಿಗೊಳಿಸಲು ಯುಡಿಎಫ್ ಮಧೂರು ಪಂ. ಸಮಿತಿ ಡಂಗುರ ಜಾಥಾ ನಡೆಸಿತು. ಜಾಥಾಕ್ಕೆ ಪಂ. ಸಮಿತಿ ಅಧ್ಯಕ್ಷ ಹಾರಿಸ್ ಸೂರ್ಲು, ಸಂಚಾಲಕ ಸುಮಿತ್ರನ್ ಪಿ.ಎ, ಮಜೀರ್ ಪಟ್ಲ ಸಹಿತ ಹಲವು ಮುಖಂಡರು ನೇತೃತ್ವ ನೀಡಿದರು.
