ಎಡಿಜಿಪಿ ಅಜಿತ್ ಕುಮಾರ್‌ರನ್ನು ಹೊಣೆಗಾರಿಕೆಯಿಂದ ಹೊರತುಪಡಿಸಲು ಸರಕಾರದ ಮೇಲೆ ಇನ್ನಷ್ಟು ಒತ್ತಡ

ತಿರುವನಂತಪುರ: ಎಂ.ಆರ್. ಅಜಿತ್ ಕುಮಾರ್ ವಿರುದ್ಧ ವಿಜಿಲೆನ್ಸ್ ತನಿಖೆ ಘೋಷಿಸಿರುವ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಹೊಣೆಗಾರಿಕೆಯುಳ್ಳ ಎಡಿಜಿಪಿ  ಹುದ್ದೆಯಿಂದ ಅವರನ್ನು ಬದಲಾಯಿಸಬೇಕೆಂದು ಸರಕಾರದ ಮೇಲೆ ಒತ್ತಡ ತೀವ್ರಗೊಂಡಿದೆ.  ಎಂ.ಆರ್. ಅಜಿತ್ ಕುಮಾರ್‌ರನ್ನು ಎಡಿಜಿಪಿ ಹುದ್ದೆಯಿಂದ ತೆರವುಗೊಳಿ ಸುವಂತೆ ಸಿಪಿಐ ಸಹಿತ ಎಡರಂಗ ಘಟಕ ಪಕ್ಷಗಳು ಈ ಹಿಂದೆಯೇ ಒತ್ತಾಯಿಸಿ ದ್ದವು. ಆದರೆ ಮುಖ್ಯಮಂತ್ರಿ ಆ ಬಗ್ಗೆ ಮೌನ ಪಾಲಿಸಿದ್ದರು. ವಿಜಿಲೆನ್ಸ್  ತನಿಖೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ  ಅವರನ್ನು ಇನ್ನು ಕೂಡಾ ಸಂರಕ್ಷಿ ಸುವುದು ಮುಖ್ಯ ಮಂತ್ರಿಗೆ ಸವಾಲಾಗಿ ಪರಿಣಮಿಸಲಿದೆಯೆಂಬ ಅಭಿಪ್ರಾಯ ಕೇಳಿಬರುತ್ತಿದೆ.

ಅಜಿತ್ ಕುಮಾರ್ ವಿರುದ್ಧ ಶಾಸಕ ಪಿ.ವಿ. ಅನ್ವರ್ ಆರೋಪ ಹೊರಿಸಿದ ಬೆನ್ನಲ್ಲೇ  ಅವರನ್ನು ಶಾಂತಿ ಸುವ್ಯವಸ್ಥೆ ಹೊಣೆಗಾರಿಕೆ ಯುಳ್ಳ ಎಡಿಜಿಪಿ ಹುದ್ದೆಯಿಂದ ಬದಲಾಯಿ ಸಬೇಕೆಂಬ ಬೇಡಿಕೆ ತೀವ್ರಗೊಂಡಿದೆ.

ಪ್ರಕರಣ ಬುಡಮೇಲುಗೊ ಳಿಸುವಿಕೆ, ಕಳ್ಳಸಾಗಾಟ ತಂಡದೊಂ ದಿಗೆ ನಂಟು, ಆರ್ ಎಸ್ ಎಸ್ ನೇತಾರರೊಂದಿಗೆ ಸಮಾಲೋಚನೆ  ಸಹಿತ ವಿವಿಧ ಆರೋಪಗಳು  ಎಂ.ಆರ್. ಅಜಿತ್ ಕುಮಾರ್ ವಿರುದ್ಧ ಹೊರಿಸಲಾಗಿದೆ. ಇದು ಎಡರಂಗದಲ್ಲೂ ಭಾರೀ ಚರ್ಚೆಗೆಡೆಯಾಗಿದ್ದರೂ ಅಜಿತ್ ಕುಮಾರ್ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿ ಮುಂದಾಗದಿರುವುದು ಕೇರಳ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

You cannot copy contents of this page