ಎಣ್ಣೆ ಗಿರಣಿಯಿಂದ ಗೆರಟೆ ಕಳವು: ಇಬ್ಬರ ಸೆರೆ
ಬದಿಯಡ್ಕ: ಮುಂಡ್ಯತ್ತಡ್ಕ ಪಳ್ಳದಲ್ಲಿರುವ ಖಾಸಗಿ ಎಣ್ಣೆ ಗಿರಣಿಯಿಂದ 25ರಷ್ಟು ಗೋಣಿ ಚೀಲ ಗೆರಟೆ ಕಳವುಗೀಡಾದ ಪ್ರಕರಣದ್ಲಲಿ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಕಲ್ಲಿಕೋಟೆ ಕಾವಿಲಂಬಾರ ಅರುಣಿತ್ತರ ನಿವಾಸಿ ಎ.ಟಿ. ಅರುಣ್ (28), ಚಾತಂಗೋಡ್ ನಡ ನಿವಾಸಿ ಅಲ್ತಾಫ್ (25) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ.
ಪಚ್ಚಂಬಳ ನಿವಾಸಿ ಸಕರಿಯಾದ ಮಾಲಕತ್ವದಲ್ಲಿರುವ ಪಳ್ಳದಲ್ಲಿರುವ ಎಣ್ಣೆ ಗಿರಣಿಯಿಂದ ಜೂನ್ 1ರಂದು ಗೆರಟೆ ಕಳವು ನಡೆಸಲಾಗಿದೆ. ಗಿರಣಿ ಸಮೀಪ 25 ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ಗೆರಟೆ ಕಳವಿಗೀಡಾಗಿತ್ತು. ಇದಕ್ಕೆ ಸುಮಾರು 15,000 ರೂ. ಮೌಲ್ಯ ಅಂದಾಜಿಸಲಾಗಿದೆ. ಕಳವು ಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಎಸ್.ಐ. ಸಿ. ಸುಮೇಶ್‌ಬಾಬು, ಪ್ರೊಬೇಶನ್ ಎಸ್.ಐ. ರೂಪೇಶ್, ಸಿಪಿಒಗಳಾದ ಗೋಕುಲ್, ವಿನೋದ್ ಕುಮಾರ್, ಶ್ರೀಶೇಶ್ ಎಂಬಿವರು ಒಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದೆ.