ಎನ್‌ಎಂಜಿ ಬ್ಯಾಂಕ್ ನಿವೃತ್ತ  ರೀಜ್ಯನಲ್ ಮೆನೇಜರ್ ನಿಧನ

ಕಾಸರಗೋಡು: ನೋರ್ತ್ ಮಲಬಾರ್ ಗ್ರಾಮೀಣ ಬ್ಯಾಂಕ್ ರೀಜ್ಯನಲ್ ಮೆನೇಜರ್ ಆಗಿ ನಿವೃತ್ತರಾದ ಅಣಂಗೂರು ನಿವಾಸಿ ಕಮಲಾಕ್ಷ ಕಲ್ಲುಗದ್ದೆ (72) ನಿಧನ ಹೊಂದಿದರು. ಹೃದಯಾಘಾತ ನಿಧನಕ್ಕೆ ಕಾರಣವೆನ್ನಲಾಗಿದೆ. ರಾಮರಾಜ ಕ್ಷತ್ರಿಯ ಸೇವಾ ಸಂಘದ ಜಿಲ್ಲಾ ಅಧ್ಯಕ್ಷರಾಗಿದ್ದರು. ವಿವಿಧ ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದರು. ಮೃತರು ಪತ್ನಿ ಸುಗಂಧಿ, ಮಕ್ಕಳಾದ ಚಂದ್ರಶೇಖರ, ರಾಜಲಕ್ಷ್ಮಿ, ಅಳಿಯ ಗಜೇಂದ್ರ, ಸೊಸೆ ವರ್ಷ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page