ಎರಡು ವಾಹನಗಳಿಗೆ ಢಿಕ್ಕಿ ಹೊಡೆದು ಗೋಡೆಗೆ ಬಡಿದ ಆಟೋ ರಿಕ್ಷಾ

ಕುಂಬಳೆ: ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ಎರಡು ವಾಹನಗಳಿಗೆ ಢಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯ ಗೋಡೆಗೆ ಬಡಿದು ನಿಂತಿದೆ.  ನಿನ್ನೆ ರಾತ್ರಿ ೮ ಗಂಟೆಗೆ ಕುಂಬಳೆ ಭಾಸ್ಕರ ನಗರದಲ್ಲಿ  ಈ ಅಪಘಾತವುಂ ಟಾಗಿದೆ. ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ಒಂದು ಕಾರು ಹಾಗೂ ಆಟೋ ರಿಕ್ಷಾಕ್ಕೆ  ಢಿಕ್ಕಿ ಹೊಡೆದ ಬಳಿಕ ರಸ್ತೆ ಬದಿಯ ಗೋಡೆಗೆ ಬಡಿದಿದೆ.  ಘಟನೆ ಅರಿವಿಗೆ ಬಂದು ಸ್ಥಳೀಯರು  ತಲುಪಿ ಚಾಲಕ ಭಾಸ್ಕರನಗರದ ವೆಂಕಟೇಶ (46)ನನ್ನು ರಿಕ್ಷಾದಿಂದ ಹೊರ ತೆಗೆದು ರಕ್ಷಿಸಿದ್ದಾರೆ. ಇದೇ ವೇಳೆ ಅಲ್ಲಿಗೆ ತಲುಪಿದ ಪೊಲೀಸರು ಚಾಲಕನನ್ನು ಬಂಧಿಸಿ ಕೇಸು ದಾಖಲಿಸಿದ್ದಾರೆ. ಈತ ಮದ್ಯದ ಅಮಲಿನಲ್ಲಿದ್ದನೆಂಬ ಕಾರಣದಿಂದ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page